ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(15-05-2024)
ನಿತ್ಯ ನೀತಿ :ನಿನ್ನ ಮನಸ್ಸಿಗೆ ನೋವು ಮಾಡುವ ವ್ಯಕ್ತಿಗಳಿಗೆ ನಿನ್ನ ಬೆಲೆ ತಿಳಿಯಬೇಕೆಂದರೆ ಮೊದಲು ನೀನು ಅವರನ್ನು ನಿರ್ಲಕ್ಷಿಸುವುದನ್ನು ಕಲಿ.
ಪಂಚಾಂಗ : ಬುಧವಾರ , 15-05-2024ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಶುಕ್ಲ ಪಕ್ಷ / ತಿಥಿ: ಅಷ್ಟಮಿ / ನಕ್ಷತ್ರ: ಆಶ್ಲೇಷಾ / ಯೋಗ: ವೃದ್ಧಿ / ಕರಣ: ವಿಷ್ಟಿಸೂರ್ಯೋದಯ : ಬೆ.05.54ಸೂರ್ಯಾಸ್ತ : 06.38ರಾಹುಕಾಲ : 12.00-1.30ಯಮಗಂಡ ಕಾಲ : 7.30-9.00ಗುಳಿಕ ಕಾಲ : 10.30-12.00
ರಾಶಿಭವಿಷ್ಯ :ಮೇಷ: ನಿಮ್ಮ ಮಾತೇ ಸರಿ ಎಂಬ ಹಠ ಬಿಟ್ಟು ವಿಶಾಲ ಮನೋಭಾವದಿಂದ ಚಿಂತನೆ ಮಾಡುವುದು ಒಳಿತು.ವೃಷಭ: ಮಕ್ಕಳಿಂದ ಸಂತಸ ಸಿಗಲಿದೆ.ಮಿಥುನ: ಉದ್ಯೋಗದಲ್ಲಿ ಬಡ್ತಿ
ಕಟಕ: ಅಮೂಲ್ಯ ವಸ್ತುವಿನ ಕಳ್ಳತನವಾಗಲಿದೆ.ಸಿಂಹ: ಪತ್ನಿ ಹಾಗೂ ಮಕ್ಕಳ ಸಹಕಾರದಿಂದ ಕೆಲಸ-ಕಾರ್ಯಗಳು ಸುಗಮವಾಗಿ ನೆರವೇರಲಿವೆ.ಕನ್ಯಾ:ಅಂದುಕೊಂಡಿದ್ದ ಕೆಲಸಗಳು ಉತ್ತಮವಾಗಿ ನೆರವೇರುವುದರಿಂದ ನೆಮ್ಮದಿ ಸಿಗಲಿದೆ.
ತುಲಾ: ಹಣದ ಕೊರತೆ ಇರುವುದಿಲ್ಲವಾದ್ದರಿಂದ ನಿಶ್ಚಿಂತರಾಗಿರುವಿರಿ.ವೃಶ್ಚಿಕ: ಬುದ್ಧಿಹೀನರಾಗಿ ವರ್ತಿಸುವಿರಿ.ಧನುಸ್ಸು: ಸಾಲಗಾರರ ಕಿರಿಕಿರಿ ಉಂಟಾಗಲಿದೆ.
ಮಕರ: ಅಜೀರ್ಣ ಮತ್ತು ಉದರಕ್ಕೆ ಸಂಬಂಧಿಸಿದ ಅನಾರೋಗ್ಯ ಎದುರಾಗಲಿದೆ.ಕುಂಭ: ಜವಾಬ್ದಾರಿ ಸ್ವೀಕರಿಸುವ ಮೊದಲು ಅದನ್ನು ನಿಭಾಯಿಸುವ ಬಗ್ಗೆ ಯೋಚಿಸಿ.ಮೀನ: ಸ್ನೇಹಿತರ ಸಹಕಾರ ಸಿಗಲಿದೆ.