ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-05-2024)
ನಿತ್ಯ ನೀತಿ ;ಒಬ್ಬರ ತಾಳ್ಮೆಯನ್ನು ಅಸಹಾಯಕತೆ ಎಂದುಕೊಳ್ಳಬಾರದು. ತಾಳ್ಮೆ ಹಿಂದಿನ ತಯಾರಿ ಬಹಳ ಗಟ್ಟಿಯಾಗಿರುತ್ತದೆ.
ಪಂಚಾಂಗ ಗುರುವಾರ 16-05-2024ಕ್ರೋನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಶುಕ್ಲ ಪಕ್ಷ / ತಿಥಿ: ಅಷ್ಟಮಿ / ನಕ್ಷತ್ರ: ಮಘಾ / ಯೋಗ: ಧ್ರುವ / ಕರಣ: ಬಾಲವ
ಸೂರ್ಯೋದಯ : ಬೆ.05.54ಸೂರ್ಯಾಸ್ತ : 06.38ರಾಹುಕಾಲ : 1.30-3.00ಯಮಗಂಡ ಕಾಲ : 6.00-7.30ಗುಳಿಕ ಕಾಲ : 9.00-10.30
ರಾಶಿ ಭವಿಷ್ಯಮೇಷ: ವ್ಯಾಪಾರದಲ್ಲಿ ಶತ್ರುಗಳ ಕಾಟ. ನಿವೇಶನ ಖರೀದಿಗೆ ನಿರ್ಧಾರ ಮಾಡುವಿರಿ.ವೃಷಭ: ಸಣ್ಣಪುಟ್ಟ ವಿಷಯಗಳಿಗೂ ಹೆಚ್ಚಿನ ಮಹತ್ವ ಕೊಡುವಿರಿ. ಮಕ್ಕಳಿಂದ ಸಂತಸ ಸಿಗಲಿದೆ.ಮಿಥುನ: ಕಚೇರಿ ಕೆಲಸವನ್ನು ನಿಷ್ಠೆಯಿಂದ ಮಾಡು ವಿರಿ. ಅನ್ಯರಿಗೆ ಉಪಕಾರ ಮಾಡಲು ಮುಂದಾಗಿ.
ಕಟಕ: ಮೋಜು-ಮಸ್ತಿಯಲ್ಲಿ ತೊಡಗುವಿರಿ.ಸಿಂಹ: ಪತ್ನಿ ಸಹಕಾರದಿಂದ ಕೆಲಸ-ಕಾರ್ಯಗಳು ಸುಗಮವಾಗಿ ನೆರವೇರಲಿವೆ.ಕನ್ಯಾ: ಅಂದುಕೊಂಡಿದ್ದ ಕೆಲಸಗಳು ಉತ್ತಮವಾಗಿ ನೆರವೇರುವುದರಿಂದ ನೆಮ್ಮದಿ ಸಿಗಲಿದೆ.
ತುಲಾ: ಹಣದ ಕೊರತೆ ಇರುವುದಿಲ್ಲ. ಕಠಿಣ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.ವೃಶ್ಚಿಕ: ಉಪನ್ಯಾಸಕ ವೃತ್ತಿಯವರಿಗೆ ನಷ್ಟ.ಧನುಸ್ಸು: ಕಷ್ಟದ ಪರಿಸ್ಥಿತಿಯಲ್ಲಿ ಜನಬಲದ ಕೊರತೆಯಾದರೂ ಸ್ನೇಹಿತರ ಸಹಕಾರ ಸಿಗಲಿದೆ.
ಮಕರ: ಅಜೀರ್ಣ ಮತ್ತು ಉದರಕ್ಕೆ ಸಂಬಂಧಿಸಿದ ಅನಾರೋಗ್ಯ ಎದುರಾಗಲಿದೆ.ಕುಂಭ: ಹೊಸ ಜನರ ಸಂಪರ್ಕ ಮಾಡಿಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ.ಮೀನ: ಜವಾಬ್ದಾರಿ ಸ್ವೀಕರಿಸುವ ಮೊದಲು ಅದನ್ನು ನಿಭಾಯಿಸುವ ಬಗ್ಗೆ ಯೋಚಿಸಿ.