ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-05-2024)
ನಿತ್ಯ ನೀತಿ :ಹೇಗೆ ಒಬ್ಬ ಕುಡುಕನಿಗೆ ಸರಿ, ಕೆಟ್ಟದ್ದು ಗೊತ್ತಾಗುವುದಿಲ್ಲವೋ ಅದೇ ರೀತಿ ಒಬ್ಬ ಸ್ವಾರ್ಥ ಆಸೆಗಳ ಸಾಧಕನಿಗೆ ಸರಿ, ಕೆಟ್ಟದ್ದು ಸ್ವಲ್ಪವೂ ಗೊತ್ತಾಗುವುದಿಲ್ಲ.
ಪಂಚಾಂಗ : 29-05-2024, ಬುಧವಾರಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಕೃಷ್ಣ ಪಕ್ಷ / ತಿಥಿ: ಷಷ್ಠಿ / ನಕ್ಷತ್ರ: ಶ್ರವಣ / ಯೋಗ: ಐಂದ್ರ / ಕರಣ: ವಿಷ್ಟಿ
ಸೂರ್ಯೋದಯ : ಬೆ.05.52ಸೂರ್ಯಾಸ್ತ : 06.42ರಾಹುಕಾಲ : 12.00-1.30ಯಮಗಂಡ ಕಾಲ : 7.30-9.00ಗುಳಿಕ ಕಾಲ : 10.30-12.00
ರಾಶಿಭವಿಷ್ಯ :ಮೇಷ: ಕಾಲೇಜು ಉಪನ್ಯಾಸಕರಿಗೆ ಅಧಿಕ ಒತ್ತಡ. ಸ್ವಯಂಕೃತ ಅಪರಾಧದಿಂದ ನಷ್ಟ ಸಂಭವಿಸಲಿದೆ.ವೃಷಭ: ವಿದೇಶ ಪ್ರಯಾಣಕ್ಕೆ ಅನುಕೂಲ ಒದಗಿ ಬರಲಿದೆ. ಪಿತ್ರಾರ್ಜಿತ ಆಸ್ತಿ ಬರಬೇಕಿದ್ದಲ್ಲಿ ತಡವಾಗಲಿದೆ.ಮಿಥುನ: ಹಳೆ ಮಿತ್ರರ ಆಗಮನವಾಗಲಿದೆ. ಉದ್ಯಮಗಳ ಬೆಳವಳಿಗೆಗೆ ಸಿದ್ಧತೆ ನಡೆಯಲಿದೆ.
ಕಟಕ: ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.ಸಿಂಹ: ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ.ಕನ್ಯಾ: ಕೌಟುಂಬಿಕ ಸಮಸ್ಯೆ ಪರಿಹರಿಸಿಕೊಳ್ಳಲು ಉತ್ತಮ ಸಮಯವಾಗಿದೆ.
ತುಲಾ: ಅಸಾಧ್ಯವಾದ ಅನಗತ್ಯ ಚಿಂತನೆಯಲ್ಲಿ ನಿಮ್ಮ ಶಕ್ತಿ ವ್ಯರ್ಥ ಮಾಡುವ ಬದಲು ಅದನ್ನು ಸರಿಯಾದ ದಿಕ್ಕಿನಲ್ಲಿ ಬಳಸಿವೃಶ್ಚಿಕ: ವಿವಾಹಿತ ದಂಪತಿ ಸ್ಮರಣೀಯ ಕ್ಷಣಗಳನ್ನು ಕಳೆಯಲು ಸಣ್ಣ ಪ್ರವಾಸಕ್ಕೆ ಹೋಗಬಹುದು.ಧನುಸ್ಸು: ರಕ್ತದೊತ್ತಡದ ಸಮಸ್ಯೆ ಕಾಣಿಸಿ ಕೊಳ್ಳಬಹುದು ಹಾಗೂ ಉಲ್ಬಣಿಸಬಹುದು.
ಮಕರ: ವೈದ್ಯಕೀಯ ವೃತ್ತಿಯಲ್ಲಿ ಕೀರ್ತಿ ಗಳಿಸುವಿರಿ.ಕುಂಭ: ಕೆಲಸದ ಸ್ಥಳದಲ್ಲಿ ಅನುಕೂಲಕರ ಸನ್ನಿವೇಶಗಳನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ.ಮೀನ:ಮಕ್ಕಳ ನಡವಳಿಕೆಯಿಂದ ಬೇಸರ.