ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-06-2024)
ನಿತ್ಯ ನೀತಿ :ನೀನು ದೇವರನ್ನು ಕುರಿತು ಪೂಜೆ ಮಾಡಿದರೆ ದೇವರು ಒಲಿಯುವುದಿಲ್ಲ. ನಿನ್ನ ಕೆಲಸವನ್ನು ನಿಷ್ಠೆ, ಪ್ರಾಮಾಣಿಕತೆಯಿಂದ ಮಾಡಿದರೆ ನಿನಗೆ ದೇವರು ಒಲಿಯುತ್ತಾನೆ.ನಿನ್ನ ಕಾಯಕ ನಿರಂತರವಾಗಿರಲಿ.
ಪಂಚಾಂಗ : ಶನಿವಾರ, 01-06-2024ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಕೃಷ್ಣ ಪಕ್ಷತಿಥಿ: ನವಮಿ / ನಕ್ಷತ್ರ: ಉತ್ತರಾಭಾದ್ರ / ಯೋಗ: ಪ್ರೀತಿ / ಕರಣ: ವಣಿಜ್‌
ಸೂರ್ಯೋದಯ – ಬೆ.05.52ಸೂರ್ಯಾಸ್ತ – 06.43ರಾಹುಕಾಲ – 9.00-10.30ಯಮಗಂಡ ಕಾಲ – 1.30-3.00ಗುಳಿಕ ಕಾಲ – 6.00-7.30
ರಾಶಿಭವಿಷ್ಯ :ಮೇಷ: ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಒಳಿತು. ಸಂಗಾತಿಯೊಂದಿಗೆ ಪ್ರವಾಸ ಕೈಗೊಳ್ಳುವಿರಿ.ವೃಷಭ: ಒತ್ತಡದ ಜೀವನದಿಂದ ಹೊರಬರುವಿರಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ.ಮಿಥುನ: ಕುಟುಂಬದಲ್ಲಿ ಪರಿಸ್ಥಿತಿಗಳು ಏರಿಳಿತ ಗಳಿಂದ ಕೂಡಿರುತ್ತವೆ.
ಕಟಕ: ಖರ್ಚುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅಗತ್ಯವಾಗಿರುತ್ತದೆ.ಸಿಂಹ: ನೀವು ಮಾಡುವ ಒಳ್ಳೆಯ ಕಾರ್ಯಗಳು ನಿಮ್ಮ ಕುಟುಂಬದ ಹಿರಿಮೆಯನ್ನು ಹೆಚ್ಚಿಸುತ್ತದೆ.ಕನ್ಯಾ:ರಕ್ತ ಸಂಬಂಧಿ ಗಳ ವಿರೋಧ ಎದುರಿಸ ಬೇಕಾಗುತ್ತದೆ.
ತುಲಾ: ಹಿರಿಯ ಸಹೋದರ ಮತ್ತು ಸಹೋದರಿಯ ರೊಂದಿಗಿನ ಸಂಬಂಧವು ಬಲವಾಗಿರುತ್ತದೆ.ವೃಶ್ಚಿಕ: ವ್ಯವಹಾರದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದುತ್ತೀರಿ.ಧನುಸ್ಸು: ಕೆಲವು ದಿನಗಳಿಂದ ಅನುಭವಿಸುತ್ತಿದ್ದ ಸಂಕಷ್ಟಗಳಿಗೆ ಮುಕ್ತಿ ದೊರೆಯಲಿದೆ.
ಮಕರ: ಅಗತ್ಯವಿರುವ ವಸ್ತುಗಳನ್ನು ಖರೀದಿಸು ವುದು ಒಳಿತು. ಸಿಕ್ಕಾಪಟ್ಟೆ ಖರ್ಚು ಮಾಡದಿರಿ.ಕುಂಭ: ದಿನವಿಡೀ ಬಿಡುವಿಲ್ಲದ ಕಾರ್ಯಗಳ ನಡುವೆ ಮಕ್ಕಳೊಂದಿಗೆ ಸಮಯ ಕಳೆಯಲು ಪ್ರಯತ್ನಿಸಿ.ಮೀನ: ತಲೆನೋವು, ಮೊಣಕಾಲು ನೋವು ಇತ್ಯಾದಿಗಳಿಂದ ತೊಂದರೆಗೆ ಒಳಗಾಗಬಹುದು.