ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(02-06-2024)
ನಿತ್ಯ ನೀತಿ :ಅನುಮಾನ ತಪ್ಪಾಗಬಹುದು. ಆದರೆ, ಅನುಭವ ಎಂದಿಗೂ ತಪ್ಪಾಗಲ್ಲ. ಅನುಮಾನ ಕೇವಲ ನಮ ಮನಸ್ಸಿನ ಕಲ್ಪನೆ. ಅನುಭವ ಜೀವನದಲ್ಲಿ ನಾವು ಕಲಿತ ಪಾಠ.
ಪಂಚಾಂಗ : 02-06-2024, ಭಾನುವಾರಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಕೃಷ್ಣ ಪಕ್ಷತಿಥಿ: ಏಕಾದಶಿ / ನಕ್ಷತ್ರ: ರೇವತಿ / ಯೋಗ: ಆಯುಷ್ಮಾನ್‌ / ಕರಣ: ಭವಸೂರ್ಯೋದಯ : ಬೆ.05.52ಸೂರ್ಯಾಸ್ತ : 06.43ರಾಹುಕಾಲ : 4.30-6.00ಯಮಗಂಡ ಕಾಲ : 12.00-1.30ಗುಳಿಕ ಕಾಲ : 3.00-4.30
ರಾಶಿಭವಿಷ್ಯ :ಮೇಷ: ಸ್ನೇಹಿತರು ಮತ್ತು ಪರಿಚಯಸ್ಥರೊಂದಿಗೆ ಹೆಚ್ಚು ಸಮಯವನ್ನು ಕಳೆಯುತ್ತೀರಿ.ವೃಷಭ: ದಾಂಪತ್ಯ ಕಲಹ ಅಂತ್ಯಗೊಳ್ಳಲಿದೆ. ಹೂಡಿಕೆಯಲ್ಲಿ ಲಾಭ ಗಳಿಸುವುವಿರಿ.ಮಿಥುನ: ಮಹಿಳೆಯರಿಗೆ ಮೇಲಧಿಕಾರಿಗಳಿಂದ ಕಿರುಕುಳ. ಏಲಕ್ಕಿ ವ್ಯಾಪಾರಿ ಗಳಿಗೆ ಅಲ್ಪ ಲಾಭ.
ಕಟಕ: ಯೋಜಿತ ರೀತಿಯಲ್ಲಿ ಹೋದರೆ ಸಮಸ್ಯೆಗಳು ನಿವಾರಣೆಯಾಗುವುದರಲ್ಲಿ ಸಂದೇಹವಿಲ್ಲ.ಸಿಂಹ: ಅನಗತ್ಯ ಮಾತು ಗಳನ್ನು ನಿಯಂತ್ರಿಸುವುದು ಬಹಳ ಒಳಿತು.ಕನ್ಯಾ:ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಸಾಕಷ್ಟು ಸಮಯ ಕಳೆಯಲು ಬಯಸುವಿರಿ.
ತುಲಾ: ಅನಾರೋಗ್ಯ ಕಾರಣದಿಂದಾಗಿ ಮನಸ್ಸಿಗೆ ಕಿರಿಕಿರಿ ಉಂಟಾಗಲಿದೆ. ದೂರ ಪ್ರಯಾಣ ಮಾಡುವಿರಿ.ವೃಶ್ಚಿಕ: ಯಶಸ್ಸು ಸಾಧಿಸಲು ಯಾವುದೇ ಅಪಾಯವನ್ನಾದರೂ ಎದುರಿಸಲು ಸಿದ್ಧರಾಗಿರುತ್ತೀರಿ.ಧನುಸ್ಸು: ವಿರೋಧಿಗಳಿಂದ ಕೆಲಸಕ್ಕೆ ಅಡೆತಡೆ.
ಮಕರ: ವೈದ್ಯವೃತ್ತಿಯಲ್ಲಿರುವವರು ಅಧಿಕ ಶ್ರಮ ಪಡುವುದರಿಂದ ಆಯಾಸ ಉಂಟಾಗಲಿದೆ.ಕುಂಭ: ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿ. ಇಲ್ಲದಿದ್ದರೆ ಅಪಘಾತ ಸಂಭವಿಸಬಹುದು.ಮೀನ: ಸ್ವಯಂಕೃತ ಅಪರಾಧಗಳಿಂದ ನಷ್ಟ ಅನುಭವಿಸುವಿರಿ. ಸಾಲದ ಚಿಂತೆ ಕಾಡಲಿದೆ.