ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(05-06-2024)
ನಿತ್ಯ ನೀತಿ :ಮನುಷ್ಯ ಮತ್ತೊಬ್ಬ ಮನುಷ್ಯನನ್ನು ಸಂತೋಷ ಪಡಿಸಲು ಹಣ ಬೇಕಾಗಿಲ್ಲ. ಆತೀಯತೆ ತುಂಬಿದ ಸಮಯ ಮತ್ತು ಪ್ರೀತಿಯ ನಾಲ್ಕು ಮಾತುಗಳು ಸಾಕು.
ಪಂಚಾಂಗ : 05-06-2024, ಬುಧವಾರಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ದಶಿ / ನಕ್ಷತ್ರ: ಕೃತ್ತಿಕಾ / ಯೋಗ: ಸುಕರ್ಮಾ / ಕರಣ: ವಿಷ್ಠಿ
ಸೂರ್ಯೋದಯ – ಬೆ.05.53ಸೂರ್ಯಾಸ್ತ – 06.44ರಾಹುಕಾಲ – 12.00-1.30ಯಮಗಂಡ ಕಾಲ – 7.30-9.00ಗುಳಿಕ ಕಾಲ – 10.30-12.00
ರಾಶಿಭವಿಷ್ಯ :ಮೇಷ: ಸ್ವ ಪ್ರಯತ್ನದಿಂದ ಯಶಸ್ಸು ಸಿಗಲಿದೆ. ದಾಂಪತ್ಯ ಜೀವನದಲ್ಲಿ ಅನಿರೀಕ್ಷಿತ ತಿರುವುಗಳಾಗಲಿವೆ.ವೃಷಭ: ಸಣ್ಣಪುಟ್ಟ ವಿಷಯಗಳಿಗೂ ಹೆಚ್ಚಿನ ಮಹತ್ವ ಕೊಡುವಿರಿ. ಮಕ್ಕಳಿಂದ ಸಂತಸ ಸಿಗಲಿದೆ.ಮಿಥುನ: ಸಂಗಾತಿಯೊಡನೆ ಉತ್ತಮ ಬಾಂಧವ್ಯ ಹೊಂದುವಿರಿ. ವಿದ್ಯಾರ್ಥಿಗಳಿಗೆ ಅನುಕೂಲ.
ಕಟಕ: ಅಮೂಲ್ಯ ವಸ್ತುವಿನ ಕಳ್ಳತನವಾಗಲಿದೆ. ಉಪನ್ಯಾಸಕ ವೃತ್ತಿಯವರಿಗೆ ನಷ್ಟ.ಸಿಂಹ: ಪತ್ನಿ ಸಹಕಾರದಿಂದ ಕೆಲಸ-ಕಾರ್ಯಗಳು ಸುಗಮ ವಾಗಿ ನೆರವೇರಲಿವೆ.ಕನ್ಯಾ:ಪೊಲೀಸ್‌ ಅಧಿ ಕಾರಿಗಳ ಜವಾಬ್ದಾರಿ ಕಡಿಮೆಯಾಗಲಿದೆ.
ತುಲಾ: ಅಂದುಕೊಂಡಿದ್ದ ಕೆಲಸಗಳು ಉತ್ತಮವಾಗಿ ನೆರವೇರುವುದರಿಂದ ನೆಮ್ಮದಿ ಸಿಗಲಿದೆ.ವೃಶ್ಚಿಕ: ಬುದ್ಧಿಹೀನರಾಗಿ ವರ್ತಿಸುವಿರಿ. ಉಪನ್ಯಾಸಕ ವೃತ್ತಿಯವರಿಗೆ ನಷ್ಟ.ಧನುಸ್ಸು: ಕಷ್ಟದ ಪರಿಸ್ಥಿತಿಯಲ್ಲಿ ಜನಬಲದ ಕೊರತೆಯಾದರೂ ಸ್ನೇಹಿತರ ಸಹಕಾರ ಸಿಗಲಿದೆ.
ಮಕರ: ಹೊಸ ಜನರ ಸಂಪರ್ಕ ಮಾಡಿಕೊಳ್ಳುವ ಅಭ್ಯಾಸವನ್ನು ರೂಢಿಸಿಕೊಳ್ಳಿ.ಕುಂಭ: ಜವಾಬ್ದಾರಿ ಸ್ವೀಕರಿಸುವ ಮೊದಲು ಅದನ್ನು ನಿಭಾಯಿಸುವ ಬಗ್ಗೆ ಯೋಚಿಸಿ.ಮೀನ: ಅಜೀರ್ಣ ಮತ್ತು ಉದರಕ್ಕೆ ಸಂಬಂಧಿಸಿದ ಅನಾರೋಗ್ಯ ಎದುರಾಗಲಿದೆ.