ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(27-05-2024)
ನಿತ್ಯ ನೀತಿ :ಒಳ್ಳೆಯ ಜನರು ನಿಮಗೆ ಸಂತೋಷ ಕೊಟ್ಟರೆ, ಕೆಟ್ಟ ಜನರು ನಿಮಗೆ ಅನುಭವ ಕೊಡುತ್ತಾರೆ ಎಂಬುದನ್ನು ಯಾವಾಗಲೂ ನೆನಪಿಡಿ.
ಪಂಚಾಂಗ : ಸೋಮವಾರ, 27-05-2024ಕ್ರೋಧಿನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ವೈಶಾಖ ಮಾಸ / ಕೃಷ್ಣ ಪಕ್ಷ / ತಿಥಿ: ಚತುರ್ಥಿ / ನಕ್ಷತ್ರ: ಪೂರ್ವಾಷಾಢ / ಯೋಗ: ಶುಭ / ಕರಣ: ಕೌಲವ /
ಸೂರ್ಯೋದಯ – ಬೆ.05.53ಸೂರ್ಯಾಸ್ತ – 06.41ರಾಹುಕಾಲ – 7.30-9.00ಯಮಗಂಡ ಕಾಲ – 10.30-12.00ಗುಳಿಕ ಕಾಲ – 1.30-3.00
ರಾಶಿಭವಿಷ್ಯ :ಮೇಷ: ಕೆಲಸದ ಒತ್ತಡ ಸ್ವಲ್ಪ ಕಡಿಮೆಯಾಗಿ ಉದ್ಯೋಗ ಸ್ಥಳದಲ್ಲಿ ನೆಮ್ಮದಿಯ ವಾತಾವರಣ ಇರಲಿದೆ.ವೃಷಭ: ವ್ಯವಹಾರದಲ್ಲಿ ಮೋಸವಾಗಬಹುದು. ಶತ್ರುಗಳ ವಿರುದ್ಧ ಜಯ ಸಾಧಿಸುವಿರಿ.ಮಿಥುನ: ದೊಡ್ಡ ತೊಂದರೆಯಲ್ಲಿ ಸಿಲುಕಿಸಿಕೊಳ್ಳುವ ಸಾಧ್ಯತೆಗಳಿವೆ. ಬಹಳ ಎಚ್ಚರಿಕೆಯಿಂದಿರಿ.
ಕಟಕ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಉತ್ತಮ ದಿನ.ಸಿಂಹ: ಕೋಪ ಅನರ್ಥಕ್ಕೆ ಕಾರಣವಾಗುತ್ತದೆ. ಉದ್ಯೋಗ ಸ್ಥಳದಲ್ಲಿ ತೊಂದರೆಯಾಗುವುದು.ಕನ್ಯಾ:ಸಾಲ ಮರು ಪಾವತಿ ಮಾಡುವಲ್ಲಿ ಯಶಸ್ವಿ ಯಾಗುವಿರಿ.
ತುಲಾ: ವೃತ್ತಿಜೀವನದಲ್ಲಿ ಕೆಲವು ಸಂದಿಗ್ಧ ಪರಿಸ್ಥಿತಿಗಳು ಎದುರಾಗಲಿವೆ.ವೃಶ್ಚಿಕ: ವಿದ್ಯಾರ್ಥಿಗಳು ಸಾಧ್ಯವಾದರೆ ಸ್ನೇಹಿತರೊಂದಿಗೆ ಅಧ್ಯಯನ ಮಾಡಿ. ದೂರ ಪ್ರಯಾಣ ಬೇಡ.ಧನುಸ್ಸು: ಮನೆಯ ಸದಸ್ಯರಿಂದ ದೂರ ಹೋಗುವ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಮಕರ: ಲಾಭ ಗಳಿಸಲು ಮತ್ತು ಆರ್ಥಿಕ ಸ್ಥಿತಿ ಬಲಪಡಿಸಲು ಅನೇಕ ಅವಕಾಶಗಳು ಸಿಗಲಿವೆ.ಕುಂಭ: ಕಠಿಣ ಪರಿಶ್ರಮ ಪಡುವುದರಿಂದ ಮಾತ್ರ ನಿಮಗೆ ಯಶಸ್ಸು ದೊರೆಯಲಿದೆ.ಮೀನ: ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಹಲವು ಬಾರಿ ಯೋಚಿಸಿ.