ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-06-2024)
ನಿತ್ಯ ನೀತಿ :ಯಾವುದಕ್ಕೂ ಭಯ ಪಡದಿರು. ನಿನ್ನ ಕರ್ಮ, ನಿನ್ನ ಧರ್ಮ, ನಿನ್ನ ಶ್ರಮ, ಭಗವಂತನ ಮೇಲಿರುವ ನಿನ್ನ ಪ್ರೇಮ ನಿನ್ನನ್ನು ರಕ್ಷಿಸುವುದು. ಇದು ಸತ್ಯ.
ಪಂಚಾಂಗ : 15-06-2024, ಶನಿವಾರಕ್ರೋಧಿನಾಮ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ / ಶುಕ್ಲ ಪಕ್ಷತಿಥಿ: ನವಮಿ / ನಕ್ಷತ್ರ: ಉತ್ತರಾಭಾದ್ರ / ಯೋಗ: ವ್ಯತೀಪಾತ / ಕರಣ: ಬಾಲವ
ಸೂರ್ಯೋದಯ – ಬೆ.05.54ಸೂರ್ಯಾಸ್ತ – 06.47ರಾಹುಕಾಲ – 9.00-10.30ಯಮಗಂಡ ಕಾಲ – 1.30-3.00ಗುಳಿಕ ಕಾಲ – 6.00-7.30
ರಾಶಿಭವಿಷ್ಯ :ಮೇಷ: ಮಕ್ಕಳಿಂದ ಸಂತೋಷ ಉಂಟಾಗುವುದು. ಆರೋಗ್ಯದ ಕಡೆ ಗಮನ ಹರಿಸಿ.ವೃಷಭ: ನೀವು ಹಿಂದೆ ಮಾಡಿದ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಶತ್ರುಗಳ ಕಾಟ ತಪ್ಪಲಿದೆ.ಮಿಥುನ: ಹೊಸ ಉದ್ಯಮ ಪ್ರಾರಂಭಿಸಲು ಬಯಸುವವರಿಗೆ ಉತ್ತಮ ಯಶಸ್ಸು ಸಿಗಲಿದೆ.
ಕಟಕ: ಗುರು-ಹಿರಿಯರ ಭೇಟಿ ಮಾಡುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಒಲವು.ಸಿಂಹ: ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುವವರಿಗೆ ಶುಭ ಫಲ ಸಿಗಲಿದೆ.ಕನ್ಯಾ: ಹಿತವಾದ ಮಾತುಗಳಿಂದ ಸಂಗಾತಿ, ಪ್ರೀತಿ ಪಾತ್ರರನ್ನು ಮೆಚ್ಚಿಸುವಿರಿ.
ತುಲಾ: ನೀವು ಮಾಡುವ ಕೆಲಸ-ಕಾರ್ಯಗಳಿಗೆ ತಾಯಿ ಯಿಂದ ಸಹಾಯ ಸಿಗಲಿದೆ.ವೃಶ್ಚಿಕ: ಷೇರು ಮಾರು ಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವವರು ಎಚ್ಚರಿಕೆಯಿಂದಿರುವುದು ಒಳಿತು.ಧನುಸ್ಸು: ವೃತ್ತಿ ಕ್ಷೇತ್ರದಲ್ಲಿ ಉತ್ತಮ ಬದಲಾವಣೆ ಗಳಾಗುತ್ತವೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ.
ಮಕರ: ಕೃಷಿ ಭೂಮಿ ಮತ್ತು ಅದಕ್ಕೆ ಸಂಬಂಧಿಸಿತ ಕೆಲಸ-ಕಾರ್ಯಗಳಿಂದ ಹೆಚ್ಚು ಲಾಭ ಗಳಿಸುವಿರಿ.ಕುಂಭ: ನಿಮ್ಮ ಸ್ವಭಾವದಲ್ಲಿ ಮಹತ್ತರವಾದ ಬದಲಾವಣೆಗಳು ಆಗಲಿವೆ.ಮೀನ: ನಿವೇಶನ ಖರೀದಿಗೆ ನಿರ್ಧರಿಸುವಿರಿ. ಹಿರಿಯರ ಮಾತಿಗೆ ಗೌರವ ಕೊಡಿ.