ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-06-2024)
ನಿತ್ಯ ನೀತಿ: ಆತವಂಚನೆ ಮಾಡಿಕೊಂಡು ಗೆಲ್ಲುವುದಕ್ಕಿಂತ ಗೌರವದಿಂದ ಸೋಲುವುದು ಒಳ್ಳೆಯದು.
ಪಂಚಾಂಗ : 17-06-2024, ಸೋಮವಾರಕ್ರೋಧಿನಾಮ ಸಂವತ್ಸರ / ಉತ್ತರಾಯಣ / ಗ್ರೀಷ್ಮ ಋತು / ಜ್ಯೇಷ್ಠ ಮಾಸ / ಶುಕ್ಲ ಪಕ್ಷ / ತಿಥಿ: ಏಕಾದಶಿ (ಪೂರ್ಣ) / ನಕ್ಷತ್ರ: ಚಿತ್ತಾ / ಯೋಗ: ಪರಿಘ / ಕರಣ: ವಣಿಜ್‌
ಸೂರ್ಯೋದಯ – ಬೆ.05.54ಸೂರ್ಯಾಸ್ತ – 06.47ರಾಹುಕಾಲ – 7.30-9.00ಯಮಗಂಡ ಕಾಲ – 10.30-12.00ಗುಳಿಕ ಕಾಲ – 1.30-3.00
ರಾಶಿಭವಿಷ್ಯ :ಮೇಷ: ವ್ಯಾಪಾರದಲ್ಲಿ ಅನುಕೂಲವಾಗಲಿದೆ. ಸಂಗಾತಿ ಮನೆ ಕಡೆಯಿಂದ ಶುಭ ಸುದ್ದಿ ಬರಲಿದೆ.ವೃಷಭ: ಹವಾಮಾನ ವೈಪರೀತ್ಯದಿಂದಾಗಿ ದೂರ ಪ್ರಯಾಣ ರದ್ದು ಮಾಡಬೇಕಾಗಬಹುದು.ಮಿಥುನ: ಹೊಸ ಪ್ರದೇಶಕ್ಕೆ ಭೇಟಿ ನೀಡುವ ಅವಕಾಶವೊಂದು ದಿಢೀರನೆ ಒದಗಿಬರಲಿದೆ.
ಕಟಕ: ಯಾರನ್ನೂ ಅತಿಯಾಗಿ ನಂಬಲು ಹೋಗ ದಿರಿ. ಪರಾವಲಂಬನೆಯಿಂದ ಅಪಾಯವೇ ಹೆಚ್ಚು.ಸಿಂಹ: ಪಿತ್ರಾರ್ಜಿತ ಆಸ್ತಿ ವಿಚಾರದ ಮಾತುಕತೆ ನಡೆಯಲಿದೆ. ವಾಹನದಿಂದ ಅಪಾಯ ಎದುರಾಗಲಿದೆ.ಕನ್ಯಾ:ಹೊಸ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
ತುಲಾ: ಕೌಟುಂಬಿಕ ಮತ್ತು ವೈವಾಹಿಕ ಜೀವನ ಆಹ್ಲಾದಕರವಾಗಿರುತ್ತದೆ.ವೃಶ್ಚಿಕ: ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.ಧನುಸ್ಸು: ಕೌಟುಂಬಿಕ ಕಲಹ ಬೀದಿಗೆ ಬರಲಿದ್ದು, ಮಾತಿಗಿಂತ ವೌನವಾಗಿರುವುದೇ ಲೇಸು.
ಮಕರ: ಸೇವೆಯ ಆಧಾರದ ಮೇಲೆ ಕೆಲಸದಲ್ಲಿ ಬಡ್ತಿ ದೊರೆಯಲಿದೆ. ಹೆಚ್ಚು ಲಾಭ ಗಳಿಸುವಿರಿ.ಕುಂಭ: ತಾಳ್ಮೆಯಿಂದ ವರ್ತಿಸಿದರೆ ಗೆಲುವು ನಿಮಗೆ ಕಟ್ಟಿಟ್ಟ ಬುತ್ತಿ ಎಂಬ ಅರಿವಿರಲಿ.ಮೀನ: ಹೆಚ್ಚಿನ ಲಾಭದ ಆಸೆಗೆ ಇರುವ ಉಳಿತಾಯದ ಹಣವನ್ನು ಖರ್ಚು ಮಾಡದಿರಿ.