ಮೂತ್ರಪಿಂಡ ದಿನ : ಯುವಜನರಲ್ಲಿ ಯೂರಿಕ್ ಆಸಿಡ್ ಮಟ್ಟ ಹೆಚ್ಚಳ
ಜಗತ್ತಿನಲ್ಲಿ ವಿಶ್ವ ಮೂತ್ರಪಿಂಡ ದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಯುವಜನರಲ್ಲಿ ಯೂರಿಕ್ ಆಸಿಡ್‌ನ ಮಟ್ಟ ಹೆಚ್ಚಳವಾಗುತ್ತಿರುವ ಕಾಳಜಿಯ ವಿಷಯವನ್ನು ಗಮನಿಸುವುದು ಮುಖ್ಯವಾಗಿದೆ. ಒಂದು ಕಾಲದಲ್ಲಿ ಕೇವಲ ಹಿರಿಯ ವಯಸ್ಕರನ್ನು ಪ್ರಾಥಮಿಕವಾಗಿ ಕಾಡುವ ಸ್ಥಿತಿ ಇದು ಎಂದು ಯೋಚಿಸಲಾಗಿತ್ತು. ಆದರೆ, ಈಗ ಯುವಜನರಲ್ಲಿ ಯೂರಿಕ್ ಆಸಿಡ್‌ನ ಮಟ್ಟ ಹೆಚ್ಚಾಗುತ್ತಿರುವುದು ಸಾಮಾನ್ಯವಾಗಿದೆ. ಈ ವಿಷಯದಲ್ಲಿ ಗಮನಹರಿಸಬೇಕಾಗಿದೆ. ಅಲ್ಲದೆ, ನಮ್ಮ ಯುವಜನರ ಆರೋಗ್ಯವನ್ನು ಸುರಕ್ಷಿತವಾಗಿ ಸಂರಕ್ಷಿಸಲು ಸಕ್ರಿಯ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಈ ತೊಂದರೆಯನ್ನು ಸೂಕ್ತವಾಗಿ ಅರ್ಥ ಮಾಡಿಕೊಳ್ಳಬೇಕಾಗಿದೆ.
ಯುರಿಕ್ ಆಸಿಡ್‌ನ ಮಟ್ಟಗಳಲ್ಲಿ ಹೆಚ್ಚಳವಾಗುವುದು ಅಥವಾ ವೈದ್ಯಕೀಯ ಭಾಷೆಯಲ್ಲಿ ಹೈಪರ್‌ಯುರಿಸಿಮಿಯ ತೊಂದರೆಯು ಎಲ್ಲಾ ರೋಗಿಗಳನ್ನು ಕಾಡುವುದಿಲ್ಲ. ಆದರೆ, ಈ ಲಕ್ಷಣಗಳನ್ನು ಅನುಭವಿಸುವ ರೋಗಿಗಳು ಸಂಧಿವಾತದoತಹ ನೋವು ಹಾಗೂ ಅನಾನುಕೂಲಗಳಿಂದ ಬಳಲುತ್ತಾರೆ ಅಲ್ಲದೆ, ಇದನ್ನು ಗೌಟ್ ಎಂದು ಕರೆಯಲಾಗುತ್ತದೆ. ಈ ಗೌಟ್ ಆರ್ಥ್ರರೈಟಿಸ್ ಪ್ರಾಥಮಿಕವಾಗಿ ಪಾದದ ಮಣಿಕಟ್ಟು ಮತ್ತು ಮಂಡಿಯ ಕೀಲುಗಳ ಮೇಲೆ ಮಾತ್ರ ಪರಿಣಾಮ ಉಂಟುಮಾಡುವುದಲ್ಲದೆ, ಇತರೆ ಕೀಲುಗಳ ಮೇಲೂ ಪರಿಣಾಮ ಬೀರಬಹುದು. ಇದರಿಂದ ಕೀಲುಗಳು ಊದಿಕೊಳ್ಳುತ್ತವೆ ಜೊತೆಗೆ ಒಳಗಡೆ ಉರಿಯೂತ ಕಾಡುವುದಲ್ಲದೆ, ಆ ಜಾಗ ಕೆಂಪಾಗಿರುತ್ತದೆ. ಆ ನಿರ್ದಿಷ್ಟ ಕೀಲಿನ ಭಾಗದಲ್ಲಿ ರೋಗಿಗಳಿಗೆ ತಾಪಮಾನ ಹೆಚ್ಚಾಗಿರುವ ಮತ್ತು ತೀವ್ರ ನೋವಿನ ಅನುಭವವಾಗುತ್ತದೆ. ಗೌಟ್ ಆರ್ಥ್ರರೈಟಿಸ್ ಅನ್ನು ಶೀಘ್ರವಾಗಿ ಗುರುತಿಸಿ ಸರಿಯಾದ ಚಿಕಿತ್ಸೆ ನೀಡಬಹುದು ಎಂಬುದು ಮುಖ್ಯವಾದ ಅಂಶವಾಗಿರುತ್ತದೆ. ಹೈಪರ್‌ಯುರಿಸಿಮಿಯಾದ ಇತರೆ ಲಕ್ಷಣಗಳೆಂದರೆ ಮೂತ್ರಪಿಂಡದಲ್ಲಿ ಕಲ್ಲುಗಳು ಕಂಡುಬರುವುದಾಗಿದೆ. ರೋಗಿ ಪದೇ ಪದೇ ಕಾಣಿಸಿಕೊಳ್ಳುವ ಮೂತ್ರಪಿಂಡದ ಕಲ್ಲಿನ ತೊಂದರೆಯಿoದ ಬಳಲುತ್ತಾನೆ. ಇದರಿಂದ ಬೆನ್ನುನೋವು ಮತ್ತು ಮೂತ್ರಕೋಶದಲ್ಲಿ ನೋವಿನಂತಹ ತೀವ್ರ ಅಸ್ವಸ್ಥತೆ ಉಂಟಾಗಬಹುದು. ಮೂತ್ರದ ಹರಿವಿಗೆ ಅಡ್ಡಿ ಉಂಟಾಗಬಹುದಲ್ಲದೆ, ಇದರಿಂದ ಅಂತಿಮವಾಗಿ ಮೂತ್ರಪಿಂಡದಲ್ಲಿ ಗಾಯ ಕಾಣಿಸಿಕೊಳ್ಳಬಹುದು.
ಯುವಜನರಲ್ಲಿ ಯೂರಿಕ್ ಆಸಿಡ್‌ನ ಮಟ್ಟ ಹೆಚ್ಚಳಕ್ಕೆ ಕೊಡುಗೆ ನೀಡುವ ಹಲವಾರು ಅಂಶಗಳು :
ಯುವಜನರಲ್ಲಿ ಯುರಿಕ್ ಆಸಿಡ್ ಹೆಚ್ಚಳ ಸಮಸ್ಯೆ ಕುರಿತು ಗಮನಹರಿಸಲು ಬಹುಮುಖಿ ಮಾರ್ಗದ ಅಗತ್ಯವಿರುತ್ತದೆ. ಇದಕ್ಕಾಗಿ ಆಹಾರಕ್ರಮದಲ್ಲಿ ಬದಲಾವಣೆಗಳು, ಜೀವನಶೈಲಿಯ ಬದಲಾವಣೆಗಳು ಮತ್ತು ಜಾಗೃತಿ ಅಭಿಯಾನಗಳ ಅಗತ್ಯವಿರುತ್ತದೆ :
ವಿಶ್ವ ಮೂತ್ರಪಿಂಡ ದಿನದಂದು ನಮ್ಮ ಯುವಜನರ ಮೂತ್ರಪಿಂಡ ಆರೋಗ್ಯಕ್ಕೆ ಆದ್ಯತೆ ನೀಡಲು ನಾವು ಶಪಥ ಮಾಡೋಣ. ಯುರಿಕ್ ಆಸಿಡ್ ಮಟ್ಟಗಳಲ್ಲಿ ಹೆಚ್ಚಳಕ್ಕೆ ಕೊಡುಗೆ ನೀಡುವ ಅಂಶಗಳ ಬಗ್ಗೆ ಜಾಗೃತಿ ಹೆಚ್ಚಿಸುವುದರಿಂದ ಯುವಪೀಳಿಗೆ ಆರೋಗ್ಯಕರ ಆಯ್ಕೆಗಳನ್ನು ಮಾಡಲು ಅವರನ್ನು ನಾವು ಸಬಲಿಕರಿಸಬಹುದಲ್ಲದೆ, ಇದರಿಂದ ಅವರು ಮುಂಬರುವ ಹಲವಾರು ವರ್ಷಗಳವರೆಗೆ ತಮ್ಮ ಮೂತ್ರಪಿಂಡದ ಆರೋಗ್ಯವನ್ನು ಉಳಿಸಿಕೊಳ್ಳಬಹುದು. ನಮ್ಮ ಯುವಜನತೆ ಗರಿಷ್ಟ ಆರೋಗ್ಯ ಮತ್ತು ಯೋಗಕ್ಷೇಮದೊಂದಿಗೆ ಸಮೃದ್ಧಿ ಹೊಂದುವ ಖಾತ್ರಿ ಮಾಡಿಕೊಳ್ಳಲು ನಾವೆಲ್ಲರೂ ಒಂದಾಗಿ ಶ್ರಮಿಸೋಣ.
ಡಾ. ರಾಘವೇಂದ್ರ ಎನ್., ಮೂತ್ರಪಿಂಡ ರೋಗಶಾಸ್ತ್ರ ಸಲಹಾ ತಜ್ಞರು ಮತ್ತು ಮೂತ್ರಪಿಂಡ ಕಸಿ ವೈದ್ಯರು, ಟ್ರೈಲೈಫ್ ಹಾಸ್ಪಿಟಲ್