ಹೊಗೇನಕಲ್‌ನಲ್ಲಿ ದೋಣಿ ವಿಹಾರ ಸ್ಥಗಿತ
ಚಾಮರಾಜನಗರ,ಜು.29– ಕೆಆರ್‌ಎಸ್‌‍ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಕಾವೇರಿ ಕೊಳ್ಳದ ನದಿಭಾಗಗಳಿಗೆ ಹರಿಸಲಾಗುತ್ತಿದ್ದು, ಜಿಲ್ಲೆಯ ಕರ್ನಾಟಕ ಹಾಗೂ ತಮಿಳುನಾಡು ಗಡಿಯ ಹೊಗೇನಕಲ್‌ನಲ್ಲಿ ಕಾವೇರಿ ಮೈದುಂಬಿ ಹರಿಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ದೋಣಿವಿಹಾರವನ್ನು ಸ್ಥಗಿತಗೊಳಿಸಲಾಗಿದೆ.
ಕೆಆರ್‌ಎಸ್‌‍ನಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸುತ್ತಿದ್ದು, ಹೊಗೇನಕಲ್‌ ಮೂಲಕ ನೀರು ಮೆಟ್ಟೂರು ಜಲಾಶಯಕ್ಕೆ ಸೇರುತ್ತಿದೆ. ನೀರಿನ ರಭಸಕ್ಕೆ ಹೊಗೇನಕಲ್‌ನಲ್ಲಿ ಕಲ್ಲುಗುಡ್ಡ, ಜಲಪಾತಗಳು ಮುಳುಗಡೆಯಾಗಿದ್ದು, ಈ ಹಿನ್ನೆಲೆಯಲ್ಲಿ ದೋಣಿ ವಿಹಾರವನ್ನು ಸ್ಥಗಿತಗೊಳಿಸಲಾಗಿದ್ದು, ನದಿಯ ಬಳಿ ಪ್ರವಾಸಿಗರ ಭೇಟಿಗೆ ನಿರ್ಬಂಧ ವಿಧಿಸಲಾಗಿದೆ.
ವೀಕೆಂಡ್‌ ಹಿನ್ನೆಲೆಯಲ್ಲಿ ನಿನ್ನೆ ಮತ್ತು ಮೊನ್ನೆ ಹೊಗೇನಕಲ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದು, ಭದ್ರತಾ ಸಿಬ್ಬಂದಿಗಳು ಪ್ರವಾಸಿಗರನ್ನು ತಡೆದು ವಾಪಸ್‌‍ ಕಳುಹಿಸಿದ್ದಾರೆ.