ರೈಲಿಗೆ ಸಿಲುಕಿ ಸ್ಟೇಷನ್ ಮಾಸ್ಟರ್ ಸಾವು
ಶಿವಮೊಗ್ಗ, ನ.23- ರೈಲಿಗೆ ಸಿಲುಕಿ ರೈಲ್ವೆ ಸ್ಟೇಷನ್ ಮಾಸ್ಟರ್ ಮೃತಪಟ್ಟಿರುವ ಘಟನೆ ಶಿವಮೊಗ್ಗ ತಾಲ್ಲೂಕಿನ ಕುಂಸಿಯಲ್ಲಿ ಇಂದು ನಡೆದಿದೆ. ಬಿಹಾರ ಮೂಲದ, ಆನಂದಪುರ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಅರುಣ್‍ಕುಮಾರ್ ಮೃತಪಟ್ಟ ದುರ್ದೈವಿಯಾಗಿದ್ದಾರೆ.
ಮುಂಬೈನ ವಸತಿ ಕಟ್ಟಡದಲ್ಲಿ ಬೆಂಕಿ, 135 ಜನರ ರಕ್ಷಣೆ
ರೈಲ್ವೆ ಹಳಿಗೆ ತಲೆಕೊಟ್ಟು ಮೃತಪಟ್ಟ ರೀತಿಯಲ್ಲಿ ಅರುಣ್‍ಕುಮಾರ್ ಅವರ ಮೃತದೇಹ ಪತ್ತೆಯಾಗಿದೆ.ನಿನ್ನೆ ಬೆಳಗ್ಗೆ ಬೆಂಗಳೂರಿನಿಂದ ರೈಲಿನಲ್ಲಿ ಆಗಮಿಸಿದ ಅವರು ಕುಮ್ಸಿ ನಿಲ್ದಾಣದಲ್ಲಿ ಇಳಿದಿದ್ದರು. ತಾವು ಬಂದಿದ್ದ ರೈಲಿಗೆ ಸಿಲುಕಿ ಸಾವನ್ನಪ್ಪಿರುವುದು ನಿಗೂಢವಾಗಿದೆ. ಈ ಸಂಬಂಧ ಶಿವಮೊಗ್ಗ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.