ಚಾಲಕನ ನಿಯತ್ರಣ ತಪ್ಪಿ ಬಸ್‌ ಪಲ್ಟಿ, ಇಬ್ಬರು ಸಾವು
ಹೊನ್ನಾವರ,ಮೇ.4-ಚಾಲಕನ ನಿಯಂತ್ರಣ ತಪ್ಪಿದ ಬಸ್‌ ಪಲ್ಟಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೂಳೆಮಕ್ಕಿ ಗೇಟ್‌ ತಿರುವಿನಲ್ಲಿ ಜರುಗಿದೆ. ಗೌರಿಬಿದನೂರು ತಾಲೂಕಿನ ಹಿರೇಬಿದನೂರಿನ ಟಿ.ಜಿ.ರುದ್ರೇಶ್‌(42), ತುಮಕೂರಿನ ಬಸ್‌ ಚಾಲಕ ಮೃತಪಟ್ಟ ದುರ್ದೈವಿಗಳು.
ತೊಂಡೇಬಾವಿ ಹೋಬಳಿಯ ಕುಂಟಚಿಕ್ಕನಹಳ್ಳಿ, ಮಲ್ಲಸಂದ್ರ ಮತ್ತು ಬಿ.ಬೊಮ್ಮಸಂದ್ರ ಗ್ರಾಮದ ರೈತರು 2 ಬಸ್‌ಗಳಲ್ಲಿ ಎರಡು ದಿನಗಳ ಪ್ರವಾಸಕ್ಕೆ ತೆರಳಿದ್ದರು. ಜೋಗ್‌ ಫಾಲ್ಸ್ ನೋಡಿಕೊಂಡು ಗೋಕರ್ಣದ ಕಡೆಗೆ ಹೋಗುತ್ತಿರುವಾಗ ಹೊನ್ನಾವರ ತಾಲೂಕಿನ ಸೂಳೆಮಕ್ಕಿ ಗೇಟ್‌ ತಿರುವಿನಲ್ಲಿ ಬಸ್‌ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಬಸ್ಸಿನಿಲ್ಲಿದ್ದ 32 ಮಂದಿಗೆ ಸಣ್ಣ ಪಟ್ಟ ಗಾಯಗಳಾಗಿದ್ದು, ಹೊನ್ನಾವರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ನಾಲ್ಕು ಮಂದಿಯನ್ನು ಶಿವಮೊಗ್ಗ ಸಾರ್ವಜನಿಕ ಆಸ್ಪತ್ರೆ ಸ್ಥಳಾಂತರಿಸಲಾಗಿದೆ.