ಅಂಜಲಿ ಹಂತಕ ಗಿರೀಶ್‌ ಸಿಐಡಿ ವಶಕ್ಕೆ
ಹುಬ್ಬಳ್ಳಿ,ಮೇ 22:ನಗರದ ವೀರಾಪುರ ಓಣಿಯ ನಿವಾಸಿ ಅಂಜಲಿ ಅಂಬೀಗೇರ ಕೊಲೆ ಆರೋಪಿ ಗಿರೀಶ್‌ ಅಲಿಯಾಸ್‌ ವಿಶ್ವ ಸಾವಂತನನ್ನ ಸಿಐಡಿ ವಶಕ್ಕೆ ತೆಗೆದುಕೊಂಡಿತು. ಕಿಮ್ಸೌ ಆಸ್ಪತ್ರೆಗೆ ಆಗಮಿಸಿದ್ದ ಸಿಐಡಿ ತಂಡವು ಗಿರೀಶ್‌ ಕರೆದೊಯ್ಯಲು ಆಗಮಿಸಿ ಎಲ್ಲಾ ಕಾನೂನು ಅನ್ವಯ ವರದಿ ತಯಾರಿಸಿತು.
ಸಿಐಡಿ ಎಸ್‌ಪಿ ವೆಂಕಟೇಶ್‌ ನೇತೃತ್ವದ ತಂಡ ಆಗಮಿಸಿದ್ದು ಗುಣಮುಖನಾದ ಹಿನ್ನೆಲೆಯಲ್ಲಿ ಈಗಾಗಲೇ ವಿಶ್ವ ಗಿರೀಶ್‌ನನ್ನು ಕಿಮ್ಸೌ ವೈದ್ಯರು ಬಿಡುಗಡೆ ಮಾಡಿದರು. ಈ ಹಿನ್ನೆಲೆಯಲ್ಲಿ ಕೋರ್ಟ್‌ಗೆ ಕರೆದೊಯ್ದು ನಂತರ ನ್ಯಾಯೕಶರ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಗಿರೀಶ್‌ನನ್ನು ಸಿಐಡಿ ಕಸ್ಟಡಿಗೆ ಕೇಳಲಿದೆ.