ಓವರ್‌ಟೇಕ್‌ ಮಾಡಿದ್ದಕ್ಕೆ ಕೆಎಸ್‌‍ಆರ್‌ಟಿಸಿ ಚಾಲಕನಿಗೆ ಚಾಕು ಇರಿದ ಟಾಟಾ ಏಸ್‌‍ ಚಾಲಕ
ದಾಬಸ್‌‍ಪೇಟೆ, ಮೇ 24-ಓವರ್‌ಟೇಕ್‌ ಮಾಡಿದ ವಿಚಾರಕ್ಕೆ ಟಾಟಾ ಏಸ್‌‍ ವಾಹನದ ಚಾಲಕ ಕೆಎಸ್‌‍ಆರ್‌ಟಿಸಿ ಬಸ್ಸನ್ನು ಅಡ್ಡಗಟ್ಟಿ ಚಾಲಕನ ಜೊತೆ ಜಗಳವಾಡಿ ಚಾಕುವಿನಿಂದ ಇರಿದಿರುವ ಘಟನೆ ದಾಬಸ್‌‍ಪೇಟೆ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಕೆಎಸ್‌‍ಆರ್‌ಟಿಸಿ ಬಸ್‌‍ ಚಾಲಕ ಶಿವಪ್ಪ ಮಡಿವಾಳ ಅವರನ್ನು ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಕೊಪ್ಪಳದಿಂದ ಬೆಂಗಳೂರಿಗೆ ಕೆಎಸ್‌‍ಆರ್‌ಟಿಸಿ ಬಸ್‌‍ ಬರುತ್ತಿದ್ದ ವೇಳೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ದಾಬಸ್‌‍ಪೇಟೆ ಬಳಿ ಟಾಟಾ ಏಸ್‌‍ ವಾಹನದ ಚಾಲಕ ಹಿಂದಿನಿಂದ ಅತೀ ವೇಗವಾಗಿ ಚಾಲನೆ ಮಾಡಿಕೊಂಡು ಬಂದು ಬಸ್ಸನ್ನು ಅಡ್ಡಗಟ್ಟಿದ್ದಾನೆ. ಏಕಾಏಕಿ ಚಾಲಕನೊಂದಿಗೆ ಜಗಳವಾಡಿ ಓವರ್‌ಟೇಕ್‌ ಮಾಡುತ್ತೀಯ ಎಂದು ಚಾಕುವಿನಿಂದ ಇರಿದಿದ್ದಾನೆ.
ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಟಾಟಾ ಏಸ್‌‍ ವಾಹನ ಚಾಲಕ ಭಾಸ್ಕರ್‌ರೆಡ್ಡಿಯನ್ನು ವಶಕ್ಕೆ ಪಡೆದಿದ್ದಾರೆ. ಚಾಕು ಇರಿತಕ್ಕೊಳಗಾದ ಶಿವಪ್ಪ ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.