ಬಾರ್‌ನಲ್ಲಿ ಕಿರಿಕ್ : ಬಿಯರ್‌ ಬಾಟಲಿಯಿಂದ ಹೊಡೆದು ಯುವಕನ ಕೊಲೆ
ಆನೇಕಲ್‌‍, ಜೂನ್‌ 26-ಬಾರ್‌ನಲ್ಲಿ ನಡೆದ ಜಗಳದಲ್ಲಿ ಯುವಕನೊಬ್ಬನಿಗೆ ಬಿಯರ್‌ ಬಾಟಲಿಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬನ್ನೇರುಘಟ್ಟ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನವೀನ್‌ (35) ಕೊಲೆಯಾದ ಯುವನಾಗಿದ್ದು, ಕಲ್ಕೆರೆಯ ನೈಟ್‌ ಸಫಾರಿ ಬಾರ್‌ನಲ್ಲಿ ಈ ಘಟನೆ ನಡೆದಿದ್ದು ಈ ಸಂಬಂಧ ಇಬ್ಬರು ಆರೋಪಿಗಳನ್ನುಪೊಲೀಸರು ಬಂಧಿಸಿದ್ದಾರೆ.
ನವೀನ್‌ ನೆನ್ನೆ ಸಂಜೆ ಮದ್ಯ ಸೇವನೆಗಾಗಿ ಬಾರ್‌ಗೆ ಹೋಗಿದ್ದ ರಾತ್ರಿ ಸುಮಾರು 8 ಗಂಟೆ ಸಂದರ್ಭದಲ್ಲಿ ಪಕ್ಕದ ಟೇಬಲ್‌‍ನಲ್ಲಿಯೇ ಕುಳಿತಿದ್ದ ಆರೋಪಿಗಳು ಯಾಕೋ ಗುರಾಯಿಸುತ್ತೀಯ ಎಂದು ಗದರಿದ್ದಾರೆ.
ಕುಡಿದ ಅಮಲಿನಲ್ಲಿ ನವೀನ್‌ ಕೂಡ ಬೈದಿದ್ದಾರೆ ಇದು ಜಗಳಕ್ಕೆ ಎಡೆ ಮಾಡಿಕೊಟ್ಟಿದ್ದು ಏಕಾ ಏಕಿ ಆರೋಪಿಗಳು ಬಿಯರ್‌ ಬಾಟಲ್‌‍ನಿಂದ ನವೀನ್‌ ತಲೆಗೆ ಹೊಡೆದಿದ್ದಾರೆ.
ಕುಸಿದುಬಿದ್ದ ಆತ ತೀವರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ಆರೋಪಿಗಳು ಪರಾರಿಯಾಗಿದ್ದಾರೆ,ಆತಂಕಗೊಂಡ ಬಾರ್‌ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸ್ಥಳಕ್ಕೆ ದಾವಿಸಿದ ಪೊಲೀಸರು ಶವವನ್ನು ಆಸ್ಪತ್ರೆಗೆ ಸಾಗಿಸಿ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದರು.
ತಡ ರಾತ್ರಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಬನ್ನೇರುಘಟ್ಟ ಪೊಲೀಸ್‌‍ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು ,ತನಿಖೆ ಮುಂದುವರೆದಿದೆ,