188 ಇಂದಿರಾ ಕ್ಯಾಂಟಿನ್‍ಗಳ ಸ್ಥಾಪನೆ
ಬೆಂಗಳೂರು,ನ.30- ಪ್ರಸಕ್ತ ವರ್ಷದಲ್ಲಿ 188 ಇಂದಿರಾ ಕ್ಯಾಂಟಿನ್‍ಗಳನ್ನು ಆರಂಭಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬೆಂಗಳೂರಿನಲ್ಲಿ 197 ಇಂದಿರಾ ಕ್ಯಾಂಟಿನ್‍ಗಳನ್ನು ಆರಂಭಿಸಲಾಗಿತ್ತು.
ಪ್ರಸಕ್ತ ವಾರ್ಡ್‍ಗಳ ಸಂಖ್ಯೆ 225 ಆಗಿರುವುದರಿಂದ ವಾರ್ಡ್‍ಗೆ ಒಂದರಂತೆ ಮತ್ತು ಅಗತ್ಯ ಇರುವ ಕಡೆ ಹೆಚ್ಚುವರಿಯಾಗಿ ಕ್ಯಾಂಟಿನ್‍ಗಳನ್ನು ತೆರೆಯಲಾಗುತ್ತಿದೆ. ಸ್ಥಳಾವಕಾಶದ ಕೊರತೆ ಇರುವ ಕಡೆ ಸಂಚಾರಿ ಕ್ಯಾಂಟಿನ್‍ಗಳನ್ನು ಆರಂಭಿಸುತ್ತಿರುವುದಾಗಿ ತಿಳಿಸಿದರು.
ಮದುವೆಗೆ ಒಪ್ಪದ ಶಿಕ್ಷಕಿಯ ಅಪಹರಣ
ಆಡಳಿತ ಪಕ್ಷದ ಶಾಸಕ ಬಿ.ಆರ್.ಪಾಟೀಲ್ ಅವರನ್ನು ನಿನ್ನೆ ಕರೆಸಿ ಮಾತುಕತೆ ನಡೆಸಿದ್ದೇನೆ. ಸಮಾಧಾನ ಹೇಳಿದ್ದೇನೆ ಎಂದು ತಿಳಿಸಿದರು. ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯದೇ ಮಗುವೊಂದು ಮೃತಪಟ್ಟಿರುವ ಘಟನೆಯನ್ನು ಪತ್ರಿಕೆಗಳಲ್ಲಿ ಓದಿದ್ದೇನೆ. ನಿರ್ದೇಶಕರೊಂದಿಗೆ ಈ ನಿಟ್ಟಿನಲ್ಲಿ ಚರ್ಚೆ ನಡೆಸುವುದಾಗಿ ಹೇಳಿದರು.