ಆನ್‍ಲೈನ್‍ ಮೂಲಕ ವೇಶ್ಯಾವಾಟಿಕೆ ನಡೆಸುತ್ತಿದ್ದ ವಿದೇಶಿ ಮಹಿಳೆ ಬಂಧನ
ಬೆಂಗಳೂರು, ಜ.9-ಟೆಲಿಗ್ರಾಂ ಮತ್ತು ವ್ಯಾಟ್ಸ್‍ಆಪ್ ಮೂಲಕ ಆನ್‍ಲೈನ್‍ನಲ್ಲಿ ನಡೆಸುತ್ತಿದ್ದ ವೇಶ್ಯಾವಾಟಿಕೆ ದಂಧೆಗೆ, ವಿದೇಶಿ ಮಹಿಳೆಯರನ್ನು ತೊಡಗಿಸಿಕೊಂಡಿದ್ದ, ವಿದೇಶಿ ಮೂಲದ ಮಹಿಳೆಯನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಡಿ.19ರಂದು ದೊಮ್ಮಲೂರಿನ ಎಚ್‍ಬಿಸಿಎಸ್ ಲೇಔಟ್‍ನ ದಿ ಲೀಲಾ ಪಾರ್ಕ್ ಹೊಟೇಲ್‍ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಹಲಸೂರು ಠಾಣೆ ಇನ್ಸ್‍ಪೆಕ್ಟರ್‍ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ನಾಲ್ವರನ್ನು ವಶಕ್ಕೆ ಪಡೆದುಕೊಂಡರು.
ಈ ಪ್ರಕರಣವನ್ನು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ಮುಂದಿನ ತನಿಖೆಗಾಗಿ ವಹಿಸಿದ್ದರು. ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು ತನಿಖಾ ಕಾಲದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾಗ ಆತ ಎಫ್‍ಸಿವಿ ಮಾಲೀಕನಾಗಿದ್ದು, ಬೆಂಗಳೂರು ಡೇಟಿಂಗ್ ಕ್ಲಬ್ ಎಂಬ ಟೆಲಿಗ್ರಾಂ ಗ್ರೂಪ್ ಮುಖಾಂತರ ಗ್ರಾಹಕರನ್ನು ಸೆಳೆದು ವೇಶ್ಯಾವಾಟಿಗೆ ತೊಡಗಿಸುತ್ತಿರುವುದು ತಿಳಿದು ಬಂದಿರುತ್ತದೆ.
ತನಿಖೆಯನ್ನು ಮುಂದುವರೆಸಿ ಆತ ನೀಡಿದ ಮಾಹಿತಿ ಮೇರೆಗೆ ವಿದೇಶಿ ಮಹಿಳೆಯರನ್ನು ವೈಶ್ಯಾವಾಟಿಕೆಗೆ ತೊಡಗಿಸಿರುವ ಬಗ್ಗೆ ಹೆಚ್ಚಿನ ವಿವರಗಳನ್ನು ಕಲೆಹಾಕಿ ನೊಂದ ವಿದೇಶಿ ಮಹಿಳೆಯರನ್ನು ರಕ್ಷಿಸಿ, ಎಫ್‍ಆರ್‍ಆರ್‍ಓ ಅಧಿಕಾರಿಗಳ ಮುಂದೆ ಹಾಜರು ಪಡಿಸಿದ್ದು, ಅವರ ಹೇಳಿಕೆಯ ಮೇರೆಗೆ, ಇತರೆ ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಲೋಕಸಭೆ ಚುನಾವಣೆ : 10 ಕ್ಷೇತ್ರಗಳಲ್ಲಿ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಿಜೆಪಿ ಪ್ಲಾನ್
ವಶಕ್ಕೆ ಪಡೆದುಕೊಂಡಿರುವ ವ್ಯಕ್ತಿಗಳ ಮಾಹಿತಿಯ ಮೇರೆಗೆ ವಿದೇಶಿ ಮಹಿಳೆಯರನ್ನು ವೇಶ್ಯಾವಾಟಿಕೆಗೆ ತೊಡಗಿಸುತ್ತಿದ್ದ ಒಬ್ಬ ಮಹಿಳೆಯನ್ನು ವಶಕ್ಕೆ ಪಡೆದು ಐದು ಮಂದಿ ವಿದೇಶಿ ಮಹಿಳೆಯರನ್ನು ಸಹ ರಕ್ಷಿಸಿ ಎಫ್‍ಆರ್‍ಆರ್‍ಓ ಅಧಿಕಾರಿಗಳ ಮುಂದೆ ಹಾಜರು ಪಡಿಸಲಾಗಿರುತ್ತದೆ. ವಶಕ್ಕೆ ಪಡೆದ ಆರೋಪಿತೆ ವ್ಯಾಪಕ ವೇಶ್ಯಾವಾಟಿಕೆ ಜಾಲವನ್ನು ಹೊಂದಿದ್ದು, ಈಕೆಯು ಕರ್ನಾಟಕದಲ್ಲೆ ಮದುವೆಯಾಗಿ ಸುಮಾರು 15ವರ್ಷಗಳಿಂದ ನಗರದಲ್ಲಿ ವಾಸವಾಗಿರುತ್ತಾರೆ.
ಸಾತ್ವಿಕ್-ಚಿರಾಗ್ ಜೋಡಿಗೆ ಲಭಿಸಿದ ಖೇಲ್‍ರತ್ನ ಪ್ರಶಸ್ತಿ
ಈಕೆ ಬೆಂಗಳೂರು, ಜೈಪುರ್, ಚೆನೈ, ಮೈಸೂರು, ದೆಹಲಿ, ಉದಯಪುರ್, ಮುಂಬೈ ಮುಂತಾದ ಕಡೆಗಳಲ್ಲಿ ವೇಶ್ಯಾವಾಟಿಕೆ ಜಾಲದ ಏಜೆಂಟ್‍ಗಳ ಜೊತೆ ಸಂಪರ್ಕದಲ್ಲಿದ್ದುಕೊಂಡು ವಿದೇಶಿ ಮಹಿಳೆಯರನ್ನೂ ಸಹ ವೇಶ್ಯಾ ವಾಟಿಕೆ ದಂದೆ ಮಾಡು ತ್ತಿರುವ ಬಗ್ಗೆ ವಿಚಾರಣೆಯಿಂದ ತಿಳಿದು ಬಂದಿದ್ದು, ತನಿಖೆ ಮುಂದುವರೆದಿದೆ.ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಡಿ.ದೇವರಾಜ್ ನಿರ್ದೇಶನದಲ್ಲಿ, ಹಲಸೂರು ಉಪ ವಿಭಾಗದ ಎ.ಸಿ.ಪಿ. ರಾಮಚಂದ್ರ ಮಾರ್ಗದರ್ಶದಂತೆ, ಬೈಯಪ್ಪನಹಳ್ಳಿ ಮತ್ತು ಹಲಸೂರು ಪೆಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.