ಕಾನೂನು ಬಾಹಿರ ಚಟುವಟಿಕೆ : 4 ವಿದೇಶಿ ಪ್ರಜೆಗಳು ಸೇರಿ 40 ಮಂದಿ ವಶಕ್ಕೆ
ಬೆಂಗಳೂರು,ಜೂ.11-ನಗರ ವ್ಯಾಪ್ತಿಯಲ್ಲಿ ಏಪ್ರಿಲ್‌ನಲ್ಲಿ ಕಾರ್ಯಾಚರಣೆ ಕೈಗೊಂಡು ಮಾದಕವಸ್ತು ಮಾರಾಟದಲ್ಲಿ ತೊಡಗಿದ್ದ 26 ಎನ್‌ಡಿಪಿಎಸ್‌‍ ಪ್ರಕರಣಗಳನ್ನು ದಾಖಲಿಸಿ ನಾಲ್ವರು ವಿದೇಶಿ ಪ್ರಜೆಗಳು ಸೇರಿದಂತೆ 40 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.ಬಂಧಿತರಿಂದ 52 ಕೆಜಿ ಗಾಂಜಾ, 2 ಕೆಜಿ ಆಶಿಷ್‌ ಆಯಿಲ್‌, 741 ಗ್ರಾಂ ಚರಸ್‌‍, 5 ಗ್ರಾಂ ಕೊಕೈನ್‌, 1 ಕೆಜಿ ಎಂಡಿಎಂಎ ಹಾಗೂ 7 ಎಲ್‌ಎಸ್‌‍ಡಿ ಸ್ಟ್ರಿಪ್‌್ಸ ವಶಪಡಿಸಿಕೊಂಡಿದ್ದಾರೆ.
ತಲೆಮರೆಸಿಕೊಂಡಿದ್ದ 16 ಮಂದಿ ಬಂಧನ:ಎಲ್‌ಪಿಆರ್‌ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ 16 ಆರೋಪಿಗಳನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯದಿಂದ ವಾರಂಟ್‌ ಮತ್ತು ಪ್ರೊಕ್ಲಮೇಷನ್‌ ಹೊರಡಿಸಲಾಗಿದೆ.
ರೌಡಿಗಳ ವಿರುದ್ಧ ಕ್ರಮ:ತಲೆಮರೆಸಿಕೊಂಡಿರುವ ರೌಡಿಗಳ ಪೈಕಿ 10 ಮಂದಿಯ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದ್ದು, 5 ರೌಡಿಗಳ ವಿರುದ್ಧ ಗಡಿಪಾರು ಕ್ರಮ ಕೈಗೊಳ್ಳಲಾಗಿದೆ.
ಎನ್‌ಡಿಪಿಎಸ್‌‍ ಪ್ರಕರಣ:ಸಿಸಿಬಿ ಮಾದಕದ್ರವ್ಯ ನಿಗ್ರಹದಳದವರು ವಿವಿಧ ಪೊಲೀಸ್‌‍ ಠಾಣೆ ವ್ಯಾಪ್ತಿಗಳಲ್ಲಿ ಕಾರ್ಯಾಚರಣೆ ನಡೆಸಿ ಮೂವರು ವಿದೇಶಿಯರು ಸೇರಿದಂತೆ 8 ಡ್ರಗ್‌ ಪೆಡ್ಲರ್‌ಗಳನ್ನು ಬಂಧಿಸಿ 2.74 ಕೋಟಿ ಮೌಲ್ಯದ ನಿಷೇಧಿತ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕೇರಳ ವ್ಯಕ್ತಿ ಸೆರೆ:ಮಾದಕವಸ್ತು ಮಾರಾಟ ಮಾಡುತ್ತಿದ್ದ ಕೇರಳ ಮೂಲದ ವ್ಯಕ್ತಿಯನ್ನು ಡಿ.ಜೆ.ಹಳ್ಳಿ ಪೊಲೀಸರು ಬಂಧಿಸಿ 4.34 ಲಕ್ಷ ಮೌಲ್ಯದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.