ಸಪ್ತಪದಿ ತುಳಿದ ಬಾಲಿವುಡ್‌ ಸ್ಟಾರ್‌ ನಟಿ ಆದಿತಿ-ಸಿದ್ಧಾರ್ಥ
       .
ಮುಂಬೈ, ಸೆ. 16-ಬಹಳ ದಿನಗಳಿಂದ ಲಿವಿಂಗ್‌ ಟುಗೆದರ್‌ನಲ್ಲಿದ್ದ ಬಾಲಿವುಡ್‌ನ ಸ್ಟಾರ್‌ ನಟಿ ಆದಿತಿರಾವ್‌ ಹೈದರಿ ಹಾಗೂ ಖ್ಯಾತ ನಟ ಸಿದ್ಧಾರ್ಥ ಅವರು ಸದ್ದಿಲ್ಲದೆ ಹೊಸಬಾಳಿಗೆ ಪ್ರವೇಶ ಮಾಡಿದ್ದಾರೆ. ಕಳೆದ ಮಾರ್ಚ್‌ ತಿಂಗಳಿನಲ್ಲಿ ಇವರ ನಿಶ್ಚಿತಾರ್ಥ ನಡೆದಿತ್ತು.
ಆದಿತಿ ಹಾಗೂ ಸಿದ್ಧಾರ್ಥ್‌ ಮದುವೆಯ ಫೋಟೋಗಳನ್ನು ಇಬ್ಬರು ತಾರೆಯರೂ ತಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಅದಕ್ಕೆ ಸುಂದರವಾದ ಅಡಿಬರಹ ನೀಡುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.ಅತಿ ಸರಳವಾಗಿ ನಡೆದ ವಿವಾಹ ಸಮಾರಂಭದಲ್ಲಿ ಆದಿತಿ- ಸಿದ್ಧಾರ್ಥ್‌ ಅವರ ಕುಟುಂಬದವರು, ಆಪ್ತೇಷ್ಟರು ಮಾತ್ರ ಪಾಲ್ಗೊಂಡಿದ್ದರು. ವಿವಾಹದ ವೇಳೆ ಸ್ಟಾರ್‌ ನಟ, ನಟಿ ಸಂಪ್ರದಾಯಿಕ ಉಡುಪು ಧರಿಸಿ ಗಮನ ಸೆಳೆದರು.
ನನ್ನ ಜೀವನದ ನಕ್ಷತ್ರ:ತಮ ವಿವಾಹದ ಫೋಟೋಗಳನ್ನು ಆದಿತಿ- ಸಿದ್ಧಾರ್ಥ್‌ ಒಟ್ಟಿಗೆ ಇನ್ಸಾಟಾಗ್ರಾಮ್‌ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದು, `ನೀನೇ ನನ್ನ ಸೂರ್ಯ, ನನ್ನ ಚಂದ್ರ ಹಾಗೂ ನನ್ನ ಬಾಳಿನ ಎಲ್ಲಾ ನಕ್ಷತ್ರ’ಎಂಬ ಅಡಿಬರಹ ನೀಡುವ ಮೂಲಕ ನಮ ಜೀವನವನ್ನು ವಿವಾಹದಲ್ಲಿ ಬಂಧಿಯಾಗಿಸಿದ್ದು, ಶಾಶ್ವತ ಪ್ರೀತಿ, ಬೆಳಕು ಹಾಗೂ ಚಮತ್ಕಾರ ಮೂಡಿಸಲು ಹೊರಟಿದ್ದೇವೆ ನಿಮ ಶ್ರೀಮತಿ ಮತ್ತು ಶ್ರೀ ಆಡು- ಸಿದ್ದು ಎಂದು ಬರೆದುಕೊಂಡಿದ್ದಾರೆ.
ಆದಿತಿರಾವ್‌ ಹೈದರಿ ಹಾಗೂ ಸಿದ್ದಾರ್ಥ್‌ ಅವರ ನವಜೀವನಕ್ಕೆ ಅಭಿಮಾನಿ ಗಳು, ಚಿತ್ರರಂಗದ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ. 2021ರಲ್ಲಿ ಬಿಡುಗಡೆಗೊಂಡ ಱಮಹಾ ಸಮುದ್ರಂೞ ಎಂಬ ಚಿತ್ರದಲ್ಲಿ ಆದಿತಿ- ಸಿದ್ದು ಒಟ್ಟಾಗಿ ನಟಿಸಿದ್ದರು. ಈ ಸಿನಿಮಾ ತೆಲುಗು- ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರದ ನಂತರ ಇಬ್ಬರು ಪ್ರೇಮಾಂಕುರಗೊಂಡು ನಂತರ ಹಲವು ಸಿನಿಮಾ ಕಾರ್ಯಕ್ರಮಗಳು ಹಾಗೂ ವಿದೇಶಿ ಪ್ರವಾಸ ಮಾಡುವ ಮೂಲಕ ಗಮನ ಸೆಳೆದಿದ್ದರು.