ಬೆಂಗಳೂರಿನ ಯಾವುದಾದರೊಂದು ವೃತ್ತಕ್ಕೆ ಲೀಲಾವತಿ ಹೆಸರಿಡಲು ಆಗ್ರಹ
ಬೆಂಗಳೂರು,ಡಿ.11- ಖ್ಯಾತ ಕಲಾವಿದೆಯಾಗಿದ್ದ ಲೀಲಾವತಿ ಅವರ ಹೆಸರನ್ನು ನಗರದ ಯಾವುದಾದರೊಂದು ಪ್ರಮುಖ ವೃತ್ತಕ್ಕೆ ನಾಮಕರಣ ಮಾಡಬೇಕು ಎಂದು ಬಿಬಿಎಂಪಿ ನೌಕರರ ಸಂಘ ಆಗ್ರಹಿಸಿದೆ.
ನಟಿ ಲೀಲಾವತಿ ಅವರ ಹೆಸರು ಅಜರಾಮರವಾಗಿ ಉಳಿಯಬೇಕು ಎಂದು ಅವರ ಹೆಸರನ್ನು ನಗರದ ನಾಯಂಡಹಳ್ಳಿ ಸರ್ಕಲ್ ಗೆ ಲೀಲಾವತಿ ವೃತ್ತ ಎಂದು ನಾಮಕರಣ ಮಾಡಲು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಅಮೃತ್ರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
  : 370ನೇ ವಿಧಿ ರದ್ದುಗೊಳಿಸಿದ ಆದೇಶ ಎತ್ತಿ ಹಿಡಿದ ಸುಪ್ರೀಂ
ಈಗಾಗಲೇ ಹಲವು ಗಣ್ಯರ ಹೆಸರು ಬೆಂಗಳೂರಿನ ರಸ್ತೆಗೆ, ವೃತ್ತಕ್ಕೆ ಇಡಲಾಗಿದೆ..ಹೀಗಾಗಿ ಇದೇ ಮಾದರಿಯಲ್ಲಿ ಲೀಲಾವತಿ ಅವರ ಹೆಸರೂ ಕೂಡ ಇಡುವುದು ಸೂಕ್ತ ಎಂದು ಅವರು ಹೇಳಿದರು.
ನಿಮ್ಮ ಮನವಿಯನ್ನು ಸರ್ಕಾರದ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭರವಸೆ ನೀಡಿದ್ದಾರೆ ಎಂದು ಅವರು ವಿವರಿಸಿದರು.