ಕಾನೂನು ಬಾಹಿರವಾಗಿ ಮಗು ದತ್ತು ಪಡೆದ ಆರೋಪದಲ್ಲಿ ಸೋನುಗೌಡ ಅರೆಸ್ಟ್
ಬೆಂಗಳೂರು,ಮಾ.22-ಕಾನೂನು ಬಾಹಿರವಾಗಿ ಮಗು ದತ್ತು ಪಡೆದ ಆರೋಪದಲ್ಲಿ ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಿಗ್‍ಬಾಸ್ ಸ್ರ್ಪಧಿ ಸೋನುಗೌಡ (27) ಅವರನ್ನು ಬಂಧಿಸಿದ್ದಾರೆ. ಸೋಶಿಯಲ್ ಮೀಡಿಯಾ ಸ್ಟಾರ್ ಸೋನುಗೌಡ ಅವರು ಮಗು ದತ್ತು ಪಡೆದಿರುವುದಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು.
ಹೀಗಾಗಿ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಸೋನುಗೌಡ ಅವರು ಕಾನೂನು ಬಾಹಿರವಾಗಿ ಮಗು ದತ್ತು ಪಡೆದಿರುವುದು ಕಂಡುಬಂದಿದೆ.ಈ ಹಿನ್ನಲೆಯಲ್ಲಿ ಅಧಿಕಾರಿ ಗೀತಾ ಅವರು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಸೋನುಗೌಡ ಅವರು ಯಾವುದೇ ನಿಯಮಗಳನ್ನು ಪಾಲಿಸದೆ ಮಗುವನ್ನು ದತ್ತು ಪಡೆದಿರುವುದು ಕಂಡುಬಂದ ಹಿನ್ನಲೆಯಲ್ಲಿ ಅವರನ್ನು ಬಂಧಿಸಿದ್ದಾರೆ.
ರೇಲ್ಸ್ ರಾಣಿ ಸೋನುಗೌಡ ಅರೆಸ್ಟ್ ಆಗಿದ್ದೇಕೆ..?#../AxLe3cnzUN
ಗೀತಾ ಹೇಳಿಕೆ:ತಮಗೆ ಇಷ್ಟಬಂದಂತೆ ಯಾವುದೇ ಮಗುವನ್ನು ದತ್ತು ಪಡೆಯುವುದು ಕಾನೂನು ಬಾಹಿರ. ಪೋಷಕರಿಂದ ನೇರವಾಗಿ ದತ್ತು ಪಡೆಯಲು ಆಗಲ್ಲ. ಒಂದು ವೇಳೆ ಪಡೆದರೆ ಅದು ಕಾನೂನು ಬಾಹಿರವಾಗುತ್ತದೆ. ಪೋಷಕರೂ ಕೂಡ ಮಗು ಕೊಡೋಕೆ ಆಗಲ್ಲ ಎಂದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ಪ್ರತಿಕ್ರಿಯಿಸಿದ್ದಾರೆ.