WWEಗೆ ನಿವೃತ್ತಿ ಘೋಷಿಸಿದ ಜಾನ್‌ ಸೆನಾ
ಟೊರೆಂಟೊ, ಜು. 7– ಡಬ್ಲ್ಯುಡಬ್ಲ್ಯುಇ ನ ದಿಗ್ಗಜ ಹಾಗೂ 16 ಬಾರಿ ಚಾಂಪಿಯನ್‌ ಜಾನ್‌ ಸೆನಾ ಅವರು ತಮ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.ಭಾನುವಾರ (ಜುಲೈ 7) ಟೊರೆಂಟೊದಲ್ಲಿ ನಡೆದ ದಿ ಬ್ಯಾಂಕ್ ಪ್ರೀಮಿಯಂ ಇವೆಂಟ್‌ನ ವೇಳೆ `ಇದೇ ಕೊನೆಯ ಬಾರಿ’ ಎಂದು ಬರೆದಿದ್ದ ವಿಶಿಷ್ಟ ಟಿ ಶರ್ಟ್‌ ಧರಿಸಿರುವ ಮೂಲಕ ತಮ ನಿವೃತ್ತಿಯ ಸುಳಿವನ್ನು ಜಾನ್‌ ಸೆನಾ ನೀಡಿದ್ದಾರೆ.
ಡಬ್ಲ್ಯುಡಬ್ಲ್ಯುಇ ಪಂದ್ಯದ ವೇಳೆ ರಿಂಗ್‌ನ ಒಳಗೆಯೇ ನಿಂತು ಕೊಂಡು ತಮ ಅಭಿಮಾನಿಗಳಿಗೆ ವಿಶೇಷ ಸಂದೇಶ ನೀಡಿದ ಜಾನ್‌ಸೆನಾ, `ಈ ರಾತ್ರಿಯೇ ನಾನು ಡಬ್ಲ್ಯುಡಬ್ಲ್ಯುಇಗೆ ವಿದಾಯ ಹೇಳುತ್ತಿದ್ದೇನೆ’ ಎಂದು ಹೇಳುವ ಮೂಲಕ ಆಶ್ಚರ್ಯ ಮೂಡಿಸಿದ್ದಾರೆ.
ಜಾನ್ ಸೆನಾ ಅವರು ತಮ್ಮ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದರೂ,ವ 2025ರ ಡಿಸೆಂಬರ್ನಲ್ಲಿ ಆಯೋಜನೆ ಗೊಂಡಿರುವ ನೆಟ್ಫ್ಲ್ಸಿ್, ರಾಯಲ್ ರಂಬಲ್ 2025, ಎಲಿಮಿನೇಷನ್ ಚೇಂಬರ್ 2025 ಮತ್ತು ರೆಸಲ್ಮೇನಿಯಾ 41ರಲ್ಲಿ ಆಡುವ ನಿರೀಕ್ಷೆ ಇದೆ.
ಜಾನ್‌ಸೆನಾ ಡಬ್ಲ್ಯುಡಬ್ಲ್ಯುಇ ಪಯಣ:2002ರ ಜೂನ್‌ನಲ್ಲಿ ಕರ್ಟ್‌ ಆಂಗಲ್‌ ಅವರ ಸವಾಲು ಸ್ವೀಕರಿಸುವ ಮೂಲಕ ಡಬ್ಲ್ಯುಡಬ್ಲ್ಯುಇ ಜೀವನ ಆರಂಭಿಸಿದ ಜಾನ್‌ಸೆನಾ ತಮ ಆಕ್ರಮಣಕಾರಿ ಆಟದಿಂದಲೇ ದಿಗ್ಗಜ ಆಟಗಾರರಿಗೆಲ್ಲ ಎಚ್ಚರಿಕೆಯ ಗಂಟೆ ನೀಡಿ ಅವರನ್ನು ಮಣಿಸುವ ಮೂಲಕ ತಮದೇ ಆದ ಅಭಿಮಾನಿಗಳ ಬಳಗವನ್ನು ಸೃಷ್ಟಿಸಿಕೊಂಡರು.
ಜಾನ್ ಸೆನಾ ಅವರು ಒಟ್ಟು 13 ಬಾರಿ ಪ್ರಶಸ್ತಿಯನ್ನು ಗೆದ್ದಿದ್ದಾರೆ, ವಿಶ್ವ ಹೆವಿವೇಟ್ ಚಾಂಪಿಯನ್ಶಿಪ್ನಲ್ಲಿ 3 ಬಾರಿ ಮತ್ತು ರಾಯಲ್ ರಂಬಲ್ ನಲ್ಲಿ 2 ಬಾರಿ ಚಾಂಪಿಯನ್ ಆಗಿದ್ದಾರೆ.ಡಬ್ಲುಬ್ಲುಇ ನಲ್ಲಿ ಮಾತ್ರವಲ್ಲದೆ ಕೆಲವು ಹಾಲಿವುಡ್ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನು ನಿಭಾಯಿಸುವ ಮೂಲಕವು ಅಭಿಮಾನಿಗಳನ್ನು ರಂಜಿಸಿರುವ ಜಾನ್ಸೆನಾ ಅವರ ನಿವೃತ್ತಿಯ ನಿರ್ಧಾರದಿಂದ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ತನ್ನ ಹಾಲಿವುಡ್ ಬದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು ಸೆನಾ ನಲ್ಲಿ ಕಡಿಮೆ ಪಾತ್ರವನ್ನು ಅಳವಡಿಸಿಕೊಂಡಿದ್ದಾರೆ.