ವಿಶ್ವಕಪ್: ಭಾರತದ ಗೆಲುವಿಗೆ ದೇಶಾದ್ಯಂತ ವಿಶೇಷ ಪೂಜೆ, ಹೋಮ-ಹವನ
ನವದೆಹಲಿ,ನ.19-ಆಹಮದಾಬಾದಿನ ನರೇಂದ್ರಮೋದಿ ಕ್ರೀಡಾಂಗಣದಲ್ಲಿಂದು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ ಗೆದ್ದು ಬರಲೆಂದು ಹಾರೈಸಿ ದೇಶಾದ್ಯಂತ ವಿಶೇಷ ಪೂಜೆ, ಹೋಮ-ಹವನ ನಡೆಯುತ್ತಿವೆ.
ಉತ್ತರ ಪ್ರದೇಶದ ವಾರಾಣಸಿಯಲ್ಲಿ ಅಭಿಮಾನಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ತ್ರಿವರ್ಣ ಧ್ವಜದೊಂದಿಗೆ ಭಾರತದ 11 ಮಂದಿ ಆಟಗಾರರ ಫೋಟೋಗಳನ್ನು ನದಿ ಬಳಿ ಹಿಡಿದುಕೊಂಡು ಫೈನಲ್‍ನಲ್ಲಿ ಭಾರತ ತಂಡ ಗೆದ್ದು ಬರಲಿ ಎಂದು ವಿಶೇಷ ಪೂಜೆ ಸಲ್ಲಿಸಲಾಯಿತು.
ವಿಪಕ್ಷ ನಾಯಕನ ಆಯ್ಕೆ: ಸ್ವಲ್ಪ ದಿನ ಕಾದು ನೋಡಿ ಎಂದ ಸಿಎಂ ಸಿದ್ದರಾಮಯ್ಯ
ಮಹಾರಾಷ್ಟ್ರದ ಪುಣೆಯಲ್ಲಿರುವ ಶ್ರೀ ಸಿದ್ಧಿವಿನಾಯಕ ದೇವಾಲಯದಲ್ಲಿ ಕ್ರಿಕೆಟ್ ಅಭಿಮಾನಿಗಳಿಂದ ಭಾರತ ಗೆಲುವಿಗಾಗಿ ಪ್ರಾರ್ಥಿಸಿ ವಿಶೇಷ ಆರತಿ ಬೆಳಗಲಾಯಿತು. ಇದೇ ರೀತಿ ದೇಶದ ವಿವಿಧ ಕಡೆ ಅಭಿಮಾನಿಗಳು ಪೂಜೆ, ಹೋಮಹವನಗಳನ್ನು ನಿನ್ನೆಯಿಂದಲೇ ಮಾಡುತ್ತಿದ್ದು, ಟೀಮ್ ಇಂಡಿಯಾ ಗೆದ್ದು ಬರಲಿ ಎಂದು ಹಾರೈಸುತ್ತಿದ್ದಾರೆ.
ಬೆಂಗಳೂರು ಸೇರಿದಂತೆ ವಿವಿಧ ಕಡೆಯೂ ಕ್ರಿಕೆಟ್ ಅಭಿಮಾನಿಗಳು ದೇವರಿಗೆ ಮೊರೆಹೋಗಿದ್ದು, ಈ ಬಾರಿ ನಮ್ಮ ತಂಡ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಲಿ ಎಂದು ಪ್ರಾರ್ಥಿಸುತ್ತಿದ್ದಾರೆ.