ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾಗೆ ಭರ್ಜರಿ ಗೆಲುವು
ಬ್ರಿಡ್ಜ್‍ಟೌನ್ (ಬಾರ್ಬಡೋಸ್), ಜೂ.9- ಇಲ್ಲಿ ನಡೆಯುತ್ತಿರುವ ವಿಶ್ವಕಪ್ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು 36 ರನ್‍ಗಳಿಂದ ಮಣಿಸಿ ಆಸ್ಟ್ರೇಲಿಯಾ ಭರ್ಜರಿ ಗೆಲುವು ಸಾಧಿಸಿದೆ.ಕಿಂಗ್ಸ್‍ಟನ್ ಓವೆಲ್‍ನಲ್ಲಿ ನಡೆದ ರೋಚಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ ಮತ್ತು ಟ್ರಾವಿಸ್ ಅವರ ಸ್ಪೋಟಕ ಆಟ ಎಲ್ಲರನ್ನೂ ತಂಗು ಬಡಿಸಿತ್ತು. ಮುರಿಯದ 70 ರನ್‍ಗಳ ಜತೆಯಾಟದ ನೆರವಿನಿಂದ ದೊಡ್ಡ ಮೊತ್ತ ಕಲೆಹಾಕಲು ನೆರವಾದರು. ನಂತರ ಇತರೆ ಆಟಗಾರರು ಭರ್ಜರಿ ಪ್ರದರ್ಶನ ನೀಡಿ ನಿಗದಿತ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 201 ರನ್ ಕಲೆ ಹಾಕಿತು.
ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್‍ನ ಆರಂಭಿಕ ಜೋಡಿಗಳಾದ ಫಿಲ್‍ಸಾಲ್ಟ್ ಮತ್ತು ಜೋಸ್ ಬಟ್ಲರ್ ಅವರು ಪ್ಲೇ ಆಫನಲ್ಲಿ ಉತ್ತಮ ಆರಂಭ ಗಳಿಸಿದರು. ಆದರೆ, ಆಸಿಸ್ ವೇಗಿ ಮಿಚಿಲ್ ಸ್ಟಾರ್ ಈ ಜೋಡಿಯನ್ನು ಬೇರ್ಪಡಿಸಿದರು.
ನಂತರ 10 ಓವರ್‍ಗಳಲ್ಲಿ 2 ವಿಕೆಟ್ ಕಳೆದುಕೊಂಡು ನೂರು ರನ್ ಕಲೆ ಹಾಕಿದ ಇಂಗ್ಲೆಂಡ್ ಈ ಮೊತ್ತವನ್ನು ಸಲೀಸಾಗಿ ಮುಟ್ಟಬಹುದು ಎಂದು ಅಂದುಕೊಂಡಿತ್ತು. ಆದರೆ, ಅದ್ಭುತ ಕ್ಷೇತ್ರ ರಕ್ಷಣೆಯಿಂದ ಪಂದ್ಯದ ದಿಕ್ಕನ್ನೇ ಬದಲಿಸಿದ ಆಸಿಸ್ ಆಟಗಾರರು ಪಂದ್ಯವನ್ನು ತಮ್ಮತ್ತ ತಿರುಗಿಸಿಕೊಂಡರು.
ಹ್ಯಾಜಲ್‍ವುಡ್, ಕಮಿನ್ಸ್ ಮತ್ತು ಝಂಪಾ ಅದ್ಭುತ ಬೌಲಿಂಗ್ ಪ್ರದರ್ಶನದ ಮೂಲಕ ಇಂಗ್ಲೆಂಡ್ ತಂಡವನ್ನು ಕಟ್ಟಿಹಾಕಿದರು. ಕೊನೆಯ ಓವರ್‍ನಲ್ಲಿ ಬೌಂಡರಿ ಸಿಕ್ಸರ್‍ಗಳು ಸಿಡಿದರೂ ಕೂಡ ಅದು ಇಂಗ್ಲೆಂಡ್‍ಗೆ ಫಲ ನೀಡಲಿಲ್ಲ.ಕೊನೆಗೆ ಆಸ್ಟ್ರೇಲಿಯಾ 36 ರನ್‍ಗಳಿಂದ ಜಯ ಸಾ„ಸಿ ಗ್ರೂಪ್ ಬಿ ಗುಂಪಿನಲ್ಲಿ ಅಗ್ರಸ್ಥಾನಕ್ಕೆ ತಲುಪಿದೆ.