ಫುಟ್ಬಾಲ್‌ ದಂತಕಥೆ ಮೆಸ್ಸಿ ನಿವೃತ್ತಿ ಘೋಷಣೆ
ಅರ್ಜೆಂಟೀನಾ,ಜೂ.13-ಅರ್ಜೆಂಟೀನಾದ ವಿಶ್ವಕಪ್‌ ವಿಜೇತ ಮತ್ತು ಫುಟ್ಬಾಲ್‌ ದಂತಕಥೆ ಲಿಯೋನೆಲ್‌ ಮೆಸ್ಸಿ ಅವರು ಇಂಟರ್‌ ಮಿಯಾಮಿ ಕ್ಲಬ್‌ನಿಂದ ನಿವತ್ತರಾಗುವುದನ್ನು ಖಚಿತಪಡಿಸಿದ್ದಾರೆ. 2025 ರ ಅಂತ್ಯದವರೆಗೆ ಇಂಟರ್‌ ಮಿಯಾಮಿಯೊಂದಿಗಿನ ಮೆಸ್ಸಿ ಇರುತ್ತಾರೆ ಎನ್ನಲಾಗಿದೆ.
ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಫುಟ್ಬಲ್‌ ತಾರೆ ಮೆಸ್ಸಿ ತಮ ವತ್ತಿಜೀವನದ ಅಂತ್ಯವು ಸಮೀಪಿಸುತ್ತಿದೆ ಎಂದು ಒಪ್ಪಿಕೊಂಡರು.ನಾನು ಫುಟ್ಬಾಲ್‌ ತೊರೆಯಲು ಸಿದ್ಧನಿಲ್ಲ. ನಾನು ಇದನ್ನು ನನ್ನ ಜೀವನದುದ್ದಕ್ಕೂ ಮಾಡಿದ್ದೇನೆ, ನಾನು ತರಬೇತಿ, ಆಟಗಳನ್ನು ಆನಂದಿಸುತ್ತೇನೆ. ಎಲ್ಲವೂ ಮುಗಿಯುತ್ತದೆ ಎಂಬ ಭಯ, ಅದು ಯಾವಾಗಲೂ ಇರುತ್ತದೆ. ಇಂಟರ್‌ ಮಿಯಾಮಿ ನನ್ನ ಕೊನೆಯ ಕ್ಲಬ್‌ ಆಗಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ದಾಖಲೆಯ ಎಂಟು ಬಾರಿ ಬ್ಯಾಲನ್‌ ಡಿಓರ್‌ ವಿಜೇತ ಬಾರ್ಸಿಲೋನಾದೊಂದಿಗೆ ದಂತಕಥೆಯಾಗಿರುವ ಮೆಸ್ಸಿ, ನಾಲ್ಕು ಚಾಂಪಿಯನ್‌್ಸ ಲೀಗ್‌ ಕಿರೀಟಗಳು ಮತ್ತು 10 ಲಾ ಲಿಗಾ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
2004-2021 ರವರೆಗೆ ಬಾರ್ಕಾಗಾಗಿ ಆಡಿದ ನಂತರ, ಮೆಸ್ಸಿ 2021-2023 ರಿಂದ ಪ್ಯಾರಿಸ್‌‍ ಸೇಂಟ್‌‍-ಜರ್ಮೈನ್‌ಗೆ ಸೇರಿದರು. ನಂತರ ಕಳೆದ ವರ್ಷ ಇಂಟರ್‌ ಮಿಯಾಮಿ ಕ್ಲಬ್‌ ಸೇರಿದ್ದರು.