ಪಿ.ಸಿ.ಮೋಹನ್ ಅವರಿಗೆ ಸಾರ್ವಜನಿಕರ ದಿಕ್ಕಾರ, ವಿಡಿಯೋ ಹಂಚಿಕೊಂಡು ಕಾಲೆಳೆದ ಕಾಂಗ್ರೆಸ್
ಬೆಂಗಳೂರು, ಏ.17-ಕಾರ್ಯಕ್ರಮವೊಂದರಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಹಾಗೂ ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಅವರಿಗೆ ಸಾರ್ವಜನಿಕರು ದಿಕ್ಕಾರ ಕೂಗಿರುವ ವಿಡಿಯೋವನ್ನು ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ಪಕ್ಷ, ಯಾರದ್ದೋ ಮುಖವಾಡ ತೋರಿಸಿ ಮತ ಪಡೆದ ಬಿಜೆಪಿ ಸಂಸದರ ಅಸಲಿ ಬಣ್ಣ ರಾಜ್ಯದ ಜನರಿಗೆ ಅರ್ಥವಾಗಿದೆ ಎಂದು ಲೇವಡಿ ಮಾಡಿದೆ.
ಬಿಜೆಪಿ ಸಂಸದರು ಅಸಮರ್ಥರು, ನಿಷ್ಕ್ರೀಯರು ಎಂದು ನಾವು ಹೇಳಿದ್ದೆವು, ಈಗ ಮತದಾರರೇ ಕ್ಕಾರ ಕೂಗುತ್ತಿದ್ದಾರೆ, ಘೇರಾವ್ ಹಾಕುತ್ತಿದ್ದಾರೆ. ಬೆಂಗಳೂರು ಸೆಂಟ್ರಲ್ ಸಂಸದ ಪಿ.ಸಿ ಮೋಹನ್ ಅವರು ಹೋದಲ್ಲೆಲ್ಲ ಮತದಾರರು 5 ವರ್ಷ ಮಾಡಿದ್ದೇನು ಎಂದು ಪ್ರಶ್ನಿಸುತ್ತಿದ್ದಾರೆ. ಈ ಪರಿ ಜನಾಕ್ರೋಶಕ್ಕೆ ಸಿಲುಕಿರುವ ಬಿಜೆಪಿ ಸರ್ವನಾಶವಾಗುವುದು ಖಚಿತ ಎಂದು ಕಾಂಗ್ರೆಸ್ ಹೇಳಿದೆ.
ಕರೋನಾ ಬಂದಾಗ ಬರಲಿಲ್ಲ, ನೆರೆ ಬಂದಾಗ ಬರಲಿಲ್ಲ, ಬರ ಬಂದಾಗ ಬರಲಿಲ್ಲ, ಕಳೆದ 5 ವರ್ಷಗಳ ಕಾಲ ಬಿಜೆಪಿ ಸಂಸದರು ಜನರಿಗೆ ಮುಖವನ್ನೇ ತೋರಿಸಿರಲಿಲ್ಲ..ಆದರೆ ಈಗ ಮತ ಕೇಳಲು ಜನರ ಬಳಿ ಬರುತ್ತಿದ್ದಾರೆ, ಜನ ಪ್ರಶ್ನಿಸುತ್ತಿದ್ದಾರೆ..ಮತದಾರರ ಎದುರು ವಿಧೇಯರಾಗಿ ನಡೆದುಕೊಳ್ಳದೆ, ಪ್ರಶ್ನಿಸಿದವರ ಎದುರು ಗೂಂಡಾಗಿರಿ ಪ್ರದರ್ಶಿಸುತ್ತಿದ್ದಾರೆ.…../QHbnbOCw9W
ಕಾಂಗ್ರೆಸ್ ಹಂಚಿಕೊಂಡಿರುವ ವಿಡಿಯೋದಲ್ಲಿ ಸಂಸದ ಪಿ.ಸಿ.ಮೋಹನ್, ಆಕ್ರೋಶದಿಂದ ಪ್ರಶ್ನೆ ಕೇಳುತ್ತಿರುವ ಜನರಿಗೆ ಸಮಜಾಯಿಷಿ ನೀಡುತ್ತಿರುವುದು ಕಂಡು ಬಂದಿದೆ. ಇದೇ ವೇಳೆ ಕೆಲವರು ಬಿಜೆಪಿ ಸಂಸದರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ವಿಡಿಯೋದಲ್ಲಿರುವ ಧ್ವನಿಯಲ್ಲಿ ಕೇಳಿ ಬರುತ್ತಿದೆ.