ಜಪಾನ್ ದ್ವೀಪದಲ್ಲಿ ಮಗುಚಿ ಬಿದ್ದ ದಕ್ಷಿಣ ಕೊರಿಯಾದ ಹಡಗು, 7 ಮಂದಿ ನಾಪತ್ತೆ
ಟೋಕಿಯೊ, ಮಾ 20-ಇಂದು ಮುಂಜಾನೆ ದಕ್ಷಿಣ ಕೊರಿಯಾದ ಸರಕು ಸಾಗಣೆ ಹಡಗು ನೈರುತ್ಯ ಜಪಾನಿನ ದ್ವೀಪದಲ್ಲಿ ಮಗುಚಿ ಬಿದ್ದಿ ಅಪಘಾತಕ್ಕೀಡಾಗಿದ್ದು ಏಳು ಮಂದಿ ನಾಪತ್ತೆಯಾಗಿದ್ದಾರೆ ನಾಲ್ವರು ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ಜಪಾನ್‍ನ ಕೋಸ್ಟ್ ಗಾರ್ಡ್ ತಿಳಿಸಿದೆ.
ಸಮುದ್ರದಲ್ಲಿ ಕಿಯೋಯಂಗ್ ಸನ್ ಕೆಮಿಕಲ್ ಟ್ಯಾಂಕರ್‍ಹಡಗಿನಿಂದ ತುರ್ತ ಸಂದೇಶ ಕರೆ ಬಂದ ತಕ್ಷಣ ನಾವು ಕಾರ್ಯಾಚರಣೆ ನಡೆಸಿದೆವು ಎಂದು ಜಪಾನ್ ಕರಾವಳಿ ಕಾವಲು ಪಡೆ ತಿಳಿಸಿದೆ. ನಾವು ನೋಡಿದಾಗ ಅದು ವಾಲುತ್ತಿತ್ತು ರಕ್ಷಣಾ ಕಾರ್ಯಾಚರಣೆ ನಡೆಸಿ ಕೊನೆಗೆ ಜಪಾನ್‍ನ ಮುಟ್ಸುರ್ ದ್ವೀಪದ ಬಳಿ ಹಡಗನ್ನು ತರಲಾಗಿದೆ. ರಕ್ಷಿಸಲ್ಪಟ್ಟ ಸಿಬ್ಬಂದಿಯ ಸ್ಥಿತಿಗತಿಗಳು ತಕ್ಷಣವೇ ತಿಳಿದಿಲ್ಲ ಎಂದು ಹೇಳಿದೆ.
ಹಡಗಿನಲ್ಲಿದ್ದ ಸಿಬ್ಬಂದಿಯಲ್ಲಿ ಒಬ್ಬ ಚೈನೀಸ್, ಇಬ್ಬರು ದಕ್ಷಿಣ ಕೊರಿಯನ್ನರು ಮತ್ತು ಎಂಟು ಇಂಡೋನೇಷಿಯನ್ನರು ಸೇರಿದ್ದಾರೆ ಎಂದು ಜಪಾನ್‍ನ ದೂರದರ್ಶನ ವರದಿ ಮಾಡಿದೆ.ಹಡಗು ಹೇಗೆ ಮುಳುಗಿತು ಎಂಬುದು ಸೇರಿದಂತೆ ಇತರ ಯಾವುದೇ ವಿವರಗಳು ತಕ್ಷಣವೇ ತಿಳಿದುಬಂದಿಲ್ಲ.