ತೈವಾನ್‌ : ಆಸ್ಪತ್ರೆಯಲ್ಲಿ ಬೆಂಕಿ 8 ಮಂದಿ ಸಾವು
      8     ' 
ತೈಪೆ (ತೈವಾನ್‌), ಅ.3-ದಕ್ಷಿಣ ತೈವಾನ್‌ನ ಆಸ್ಪತ್ರೆಯೊಂದರಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಬೆಂಕಿಯಲ್ಲಿ ಅನಾಹುತದಲ್ಲಿ ಎಂಟು ಜನರು ಸಾವನ್ನಪ್ಪಿದ್ದಾರೆ.ಇದರ ನಡುವೆ ಚಂಡಮಾರುತದಿಂದ ದ್ವೀಪ ರಾಷ್ಟ್ರ ಜರ್ಜರಿತವಾಗಿದೆ. ಟೈಫೂನ್‌ ಕ್ರಾಥಾನ್‌ನಿಂದ ತೀವ್ರವಾಗಿ ಹಾನಿಗೊಳಗಾದ ಪಿಯಿಂಗ್‌ಟಂಗ್‌‍ ಕೌಂಟಿಯಲ್ಲಿ ಬೆಂಕಿ ದುರಂತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ಮಧ್ಯಾಹ್ನ ಧಾರಾಕಾರ ಮಳೆ ಮತ್ತು ಭಾರೀ ಗಾಳಿಯೊಂದಿಗೆ ಭೂಕುಸಿತದಿಂದ ದ್ವೀಪ ರಾಷ್ಟ್ರದ ಕೆಲವು ಭಾಗಗಳನ್ನು ವಾಹನ ಸಂಚಾರ ,ಜನರ ಒಡಾಟ ಸ್ಥಗಿತಗೊಳಿಸಲಾಗಿದೆ.
ಆಸ್ಪತ್ರೆಯಿಂದ ಹತ್ತಾರುರೋಗಿಗಳನ್ನು ಸ್ಥಳಾಂತರಿಸಲಾಯಿತು ಮತ್ತು ಹತ್ತಿರದ ಆಶ್ರಯದಾಮಕ್ಕೆ ಕಳುಹಿಸಲಾಗಿದೆ. ರೋಗಿಗಳನ್ನು ಸ್ಥಳಾಂತರಿಸುವಲ್ಲಿ ಮತ್ತು ಜ್ವಾಲೆಯನ್ನು ನಂದಿಸುವಲ್ಲಿ ವೈದ್ಯಕೀಯ ಕಾರ್ಯಕರ್ತರು ಮತ್ತು ಅಗ್ನಿಶಾಮಕ ದಳದವರು ಶ್ರಮಿಸಿದ್ದಾರೆ.ಚಂಡಮಾರುತ ಅನಾಹುತ ನಿಯಂತ್ರಣಕ್ಕೆ ಹತ್ತಿರದ ನೆಲೆಯಿಂದ ಸೈನಿಕರನ್ನು ಸಜ್ಜುಗೊಳಿಸಲಾಗಿದೆ.