ಮಣಿಪುರದಲ್ಲಿ ನಿಷೇಧಿತ ಸಂಘಟನೆಯ ನಾಲ್ವರು ಉಗ್ರರ ಬಂಧನ
ಇಂಫಾಲ, ಮೇ 17-ನಿಷೇಧಿತ ಸಂಘಟನೆ ನಾಲ್ವರು ಉಗ್ರರನ್ನು ಮಣಿಪುರ ಪೊಲೀಸರು ಮತ್ತು ಅಸ್ಸಾಂ ರೈಫಲ್ಸ್ ನ ಸಂಯೋಜಿತ ತಂಡವು ತೌಬಲ್‌ ಜಿಲ್ಲೆಯಲ್ಲಿ ಬಂಧಿಸಿದೆ ಪೀಪಲ್‌ ವಾರ್‌ ಗ್ರೂಪ್‌ನ ಉಗ್ರರ ಬಗ್ಗೆ ಗುಪ್ತಚರ ಮಾಹಿತಿಯ ಮೇರೆಗೆ, ಯೈರಿಪೋಕ್‌ ಬಜಾರ್‌ ಪ್ರದೇಶದಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು, ಈ ಸಂದರ್ಭದಲ್ಲಿ ಉಗ್ರರನ್ನು ಬಂಧಿಸಲಾಯಿತು ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಧಿತ ಉಗ್ರರಿಂದ ಐದು ಮೊಬೈಲ್‌,ಎರಡು 9 ಎಂಎಂ ಪಿಸ್ತೂಲ್‌ಗಳು, 15 ಗುಂಡು, , ಇಪ್ಪತ್ತು 5.56 ಎಂಎಂ ಮದ್ದುಗುಂಡುಗಳು, ನಾಲ್ಕು 7.62 ಎಂಎಂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇಂಫಾಲ್‌ ಪಶ್ಚಿಮ ಜಿಲ್ಲೆಯಿಂದ ನಿಷೇಧಿತ ಸಂಘಟನೆ ಕೆಸಿಪಿ (ತೈಬಂಗಾನ್ಬಾ) ಸಂಘಟನೆಯ ಸಕ್ರಿಯ ಸದಸ್ಯನನ್ನು ಪೊಲೀಸರು ಬಂಧಿಸಿದ್ದರು .32 ಪಿಸ್ತೂಲ್‌ ಮತ್ತು ನಾಲ್ಕು ಸುತ್ತಿನ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ಇಂಫಾಲ್‌ ಪ್ರದೇಶದ ಪಾವೊನಾ ಮತ್ತು ತಂಗಲ್‌ ಬಜಾರ್‌ನಲ್ಲಿರುವ ಅಂಗಡಿಗಳಿಂದ ಹಣ ಸುಲಿಗೆ ಮಾಡುತ್ತಿದ್ದ ಆತನ ವಿಚಾರಣೆ ಮೇಲೆ ಉಗ್ರರ ಚಲನವನದ ಬಗ್ಗೆ ಮಾಹಿತಿ ಸಿಕ್ಕಿತ್ತು.