ಅಸ್ಸಾಂನ ಚಂಫೈ ಜಿಲ್ಲೆಯಲ್ಲಿ 8.43 ಕೋಟಿ ಮೌಲ್ಯದ ಡ್ರಗ್ಸ್ ವಶ
ಐಜ್ವಾಲ್‌‍,ಮೇ.25-ಅಸ್ಸಾಂ ರೈಫಲ್ಸ್‌‍ ಮತ್ತು ಮಿಜೋರಾಂ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಚಂಫೈ ಜಿಲ್ಲೆಯಲ್ಲಿ 8.43 ಕೋಟಿ ರೂ.ಮೌಲ್ಯದ ಹೆರಾಯಿನ್‌ ವಶಪಡಿಸಿಕೊಂಡಿದ್ದಾರೆ.
ಅಸ್ಸಾಂ ರೈಫಲ್‌್ಸನ ಮೂಲಗಳು ನೀಡಿದ ಸುಳಿವಿನ ಮೇರೆಗೆ ಅರೆ ಮಿಲಿಟರಿ ಪಡೆಗಳು ಮತ್ತು ಮಿಜೋರಾಂ ಪೊಲೀಸ್‌‍ ಸಿಬ್ಬಂದಿಗಳ ಜಂಟಿ ತಂಡವು ಮಿಜೋರಾಂನ ಚಂಫೈ ಜಿಲ್ಲೆಯ ನಗುರ್‌ ಗ್ರಾಮದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿದ್ದ ಹೆರಾಯಿನ್‌ ಅನ್ನು ವಶಪಡಿಸಿಕೊಂಡಿದೆ.ಭಾರಿ ಪ್ರಮಾಣದ ಮಾದಕ ದ್ರವ್ಯವನ್ನು ವ್ಯಾನಾರ್‌ನಿಂದ ಕಳ್ಳಸಾಗಾಣಿಕೆ ಮೂಲಕ ತರಲಾಗಿದೆ ಎಂದು ಶಂಕಿಸಲಾಗಿದೆ.
ನಿಷಿದ್ಧ ವಸ್ತುಗಳನ್ನು ವ್ಯಾನಾರ್‌ನಿಂದ ಕಳ್ಳಸಾಗಣೆ ಮಾಡಲಾಗಿದ್ದು, ಇತರ ರಾಜ್ಯಗಳಿಗೆ ಸರಬರಾಜು ಮಾಡಬೇಕಿತ್ತು ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಈ ಪ್ರಕರಣದಲ್ಲಿ ಇದುವರೆಗೂ ಯಾರನ್ನು ಬಂಧಿಸಿಲ್ಲ.