ನವದೆಹಲಿ : ವಸತಿ ಕಟ್ಟಡದಲ್ಲಿ ಬೆಂಕಿ, ಮೂವರ ಸಾವು
ನವದೆಹಲಿ, ಮೇ 26 (ಪಿಟಿಐ) :ಪೂರ್ವ ದಿಲ್ಲಿಯ ಕಷ್ಣಾ ನಗರ ಪ್ರದೇಶದ ವಸತಿ ಕಟ್ಟಡದಲ್ಲಿ ಇಂದು ಮುಂಜಾನೆ ಸಂಭವಿಸಿದ ಭಾರೀ ಬೆಂಕಿ ಅನಾಹುತದಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಎಂದು ದಿಲ್ಲಿ ಅಗ್ನಿಶಾಮಕ ಸೇವೆಯ ಅಧಿಕಾರಿಗಳು ತಿಳಿಸಿದ್ದಾರೆ.
ನಮಗೆ ಕಷ್ಣಾ ನಗರದಿಂದ ಮುಂಜಾನೆ 2.35 ಕ್ಕೆ ಬೆಂಕಿಯ ಕರೆ ಬಂದಿತು. ಬೆಳಿಗ್ಗೆ 7.20 ಕ್ಕೆ ಬೆಂಕಿಯನ್ನು ನಂದಿಸಲಾಯಿತು. ಒಟ್ಟು ಐದು ಅಗ್ನಿಶಾಮಕ ಟೆಂಡರ್‌ಗಳನ್ನು ಸ್ಥಳಕ್ಕೆ ಧಾವಿಸಲಾಗಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ (ಡಿಎಫ್‌ಎಸ್‌‍) ಮುಖ್ಯಸ್ಥ ಅತುಲ್‌ ಗಾರ್ಗ್‌ ಹೇಳಿದ್ದಾರೆ.ಒಟ್ಟು 13 ಜನರನ್ನು ರಕ್ಷಿಸಲಾಗಿದೆ ಆದರೆ ಮೂವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಗಿದೆ ಎಂದು ಅವರು ಹೇಳಿದರು.