ವಾಯುಪಡೆಯ ನಿವೃತ್ತ ಯೋಧನ ಕೊಂದ ವಕೀಲ ಮತ್ತು ಆತನ ಮಗನ ಬಂಧನ
ನಾಗ್ಪುರ, ಮೇ 28-ಭಾರತೀಯ ವಾಯುಪಡೆಯ ಮಾಜಿ ಯೋಧನನ್ನು ಕೊಂದ ಆರೋಪದ ಮೇಲೆ ಇಲ್ಲಿನ ನಾಗ್ಪುರದ ಪೊಲೀಸರು ವಕೀಲ ಮತ್ತು ಆತನ ಮಗನನ್ನು ಬಂಧಿಸಿದ್ದಾರೆ.
ಕೊಲೆಯಾದವರನ್ನು ಹರೀಶ್‌ ದಿವಾಕರ್‌ ಕರಾಡೆ (60)ಎಂದು ಗುರುತಿಸಲಾಗಿದ್ದು ಆರೋಪಿ ವಕೀಲ ಅಶ್ವಿನ್‌ ಮಧುಕರ್‌ ವಾಸ್ನಿಕ್‌ (56) ಮತ್ತು ಆತನ ಪುತ್ರ ಆವಿಷ್ಕರ್‌ ಅಶ್ವಿನ್‌ ವಾಸ್ನಿಕ್‌ (23) ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಭಾನುವಾರ ರಾತ್ರಿ ನಗರದ ಹುಡ್ಕೋ ಕಾಲೋನಿಯಲ್ಲಿರುವ ವಕೀಲರ ಮನೆಗೆ ಹರೀಶ್‌ ಭೇಟಿ ನೀಡಿ ಹಣಕಾಸು ವ್ಯವಹಾರದ ಬಗ್ಗೆ ವಕೀಲ ಅಶ್ವಿನ್‌ ಮಧುಕರ್‌ ಜತೆ ಮಾತುಕತೆ ತಾರಕ್ಕಕ್ಕೆ ಏರಿ ವಾಗ್ವಾದ ನಡೆದಿದೆ.
ಅಲ್ಲಿಗೆ ಬಂದ ಅವಿಷ್ಕರ್‌ ಕೊಡಲಿ, ಪೈಪ್‌ ಮತ್ತು ಚಾಕುವಿನಿಂದ ಹರೀಶ್‌ ಮೇಲೆ ಹಲ್ಲೆ ನಡೆಸಿ ಕೊಂದಿದ್ದಾರೆ ಎಂದು ಪೊಲೀಸ್‌‍ಅಧಿಕಾರಿ ತಿಳಿಸಿದ್ದಾರೆ.ಹರೀಶ್‌ ಪತ್ನಿ ದೂರಿನ ಮೇರೆಗೆ ಪೊಲೀಸರು ತಂದೆ-ಮಗ ಇಬ್ಬರನ್ನು ಬಂಧಿಸಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡೆಸಿ ಇಬ್ಬರನ್ನು ಮೇ 29 ರವರೆಗೆ ಪೊಲೀಸ್‌‍ ಕಸ್ಟಡಿಗೆ ನೀಡಲಾಗಿದೆ.