ಅಸ್ಸಾಂನಲ್ಲಿ ಎಂಟು ಕೋಟಿ ಮೌಲ್ಯದ ಯಾಬಾ ಮಾತ್ರೆ ಸೀಜ್‌
ಗುವಾಹಟಿ, ಜೂ 6 (ಪಿಟಿಐ)ಪೊಲೀಸರು 8 ಕೋಟಿ ರೂಪಾಯಿ ಮೌಲ್ಯದ ಯಾಬಾ ಮಾತ್ರೆಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಅಸ್ಸಾಂನ ಕರ್ಬಿ ಅಂಗ್ಲಾಂಗ್‌ ಜಿಲ್ಲೆಯ ಇಬ್ಬರನ್ನು ಬಂಧಿಸಿದ್ದಾರೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
ಮಾದಕ ದ್ರವ್ಯ ವಿರೋಧಿ ಡ್ರೈವ್‌ ನಡೆಸುತ್ತಿದ್ದಾಗ ದಿಲ್ಲೈ ಪಾಯಿಂಟ್‌ನಲ್ಲಿ ವಾಹನವನ್ನು ತಡೆಹಿಡಿದು ಪರಿಶೀಲನೆ ನಡೆಸಿದಾಗ 8 ಕೋಟಿ ಮೌಲ್ಯದ 40,000 ಯಾಬಾ ಟ್ಯಾಬ್ಲೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಕ್ಸ್ ನಲ್ಲಿನ ಪೋಸ್ಟ್‌ನಲ್ಲಿ ಶರ್ಮಾ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ, ಮಾದಕವಸ್ತು ಸಾಗಣೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು. ಯಾಬಾ ವ್ಯಸನಕಾರಿ ಉತ್ತೇಜಕ ಮೆಥಾಂಫೆಟಮೈನ್‌ ಮತ್ತು ಕೆಫೀನ್‌ ಅನ್ನು ಒಳಗೊಂಡಿದೆ. ರಾಜ್ಯವನ್ನು ಮಾದಕ ದ್ರವ್ಯ ಮುಕ್ತಗೊಳಿಸುವ ನಿಟ್ಟಿನಲ್ಲಿ ಅಸ್ಸಾಂ ಪೊಲೀಸರ ಪ್ರಯತ್ನವನ್ನು ಸಿಎಂ ಶ್ಲಾಘಿಸಿದರು.