ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ್ದ ಐಸ್‌‍ ಕ್ರೀಂನಲ್ಲಿತ್ತು ಮಾನವನ ಬೆರಳು..!
ಮುಂಬೈ,ಜೂ.13-ಐಸ್‌‍ ಕ್ರೀಂನಲ್ಲಿ ಮಾನವನ ಬೆರಳು ಪತ್ತೆಯಾಗಿರುವ ಆಘಾತಕಾರಿ ಘಟನೆ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ನಡೆದಿದೆ. ಮಲ್ನಾಡ್‌ನ ಉಪನಗರದಲ್ಲಿ ನೆಲೆಸಿರುವ ಮಹಿಳೆಯೊಬ್ಬರು ಯಮೋ ಐಸ್‌‍ಕ್ರೀಮ್‌ನಿಂದ ಆನ್‌ಲೈನ್‌ನಲ್ಲಿ ಕೋನ್‌ ಐಸ್‌‍ಕ್ರೀಮ್‌ ಅನ್ನು ಆರ್ಡರ್‌ ಮಾಡಿದ್ದರು, ಆದರೆ ಅದನ್ನು ಬಿಚ್ಚಿದ ನಂತರ ಅವರು ಆಘಾತಕ್ಕೊಳಗಾಗಿದ್ದರು.
ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ಫೋಟೋವು ಐಸ್‌‍ಕ್ರೀಮ್‌ನ ಮೇಲ್ಭಾಗದಿಂದ ಮಾನವನ ಬೆರಳು ಅಂಟಿಕೊಂಡಿರುವುದನ್ನು ಕಂಡು ಬಂದಿದೆ.ಆಘಾತ ಮತ್ತು ಅಸಹ್ಯದಿಂದ, ಅವರು ಐಸ್‌‍ ಕ್ರೀಂನೊಂದಿಗೆ ಮಲಾಡ್‌ ಪೊಲೀಸ್‌‍ ಠಾಣೆಗೆ ಧಾವಿಸಿ ಯಮೋ ಐಸ್‌‍ ಕ್ರೀಂ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಐಸ್‌‍ ಕ್ರೀಮ್‌ ಅನ್ನು ತನಿಖೆಗೆ ಮತ್ತು ಬೆರಳನ್ನು ವಿಧಿವಿಜ್ಞಾನ ವಿಶ್ಲೇಷಣೆಗೆ ಕಳುಹಿಸಿದ್ದಾರೆ.