ನದಿಯಲ್ಲಿ ಕೊಚ್ಚಿ ಹೋದ ಐವರು ಸೈನಿಕರು
ನವದೆಹಲಿ,ಜೂ.29-ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆ ಬಳಿ ನದಿ ದಾಟುವ ಅಭ್ಯಾಸದ ವೇಳೆ ಐವರು ಸೈನಿಕರು ಕೊಚ್ಚಿ ಹೋಗಿದ್ದಾರೆ.ಸೈನಿಕರಿದ್ದ ಟ್ಯಾಂಕ್‌ ಅಪಘಾತಕ್ಕೀಡಾದ ಪರಿಣಾಮ ಐವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.
ಸತ್ತ ಐವರಲ್ಲಿ ಜೂನಿಯರ್‌ ಕಮಿಷನ್ಡ್‌‍ ಆಫೀಸರ್‌ ಸೇರಿದ್ದಾರೆ ಎಂದು ತಿಳಿದುಬಂದಿದೆ.ಸೈನಿಕರು ತರಬೇತಿ ಕಾರ್ಯಾಚರಣೆಯಲ್ಲಿದ್ದರು ಮತ್ತು ತಮ ಟಿ-72 ಟ್ಯಾಂಕ್‌ನಲ್ಲಿ ಲೇಹ್‌ನಿಂದ 148 ಕಿಲೋಮೀಟರ್‌ ದೂರದಲ್ಲಿರುವ ಮಂದಿರ್‌ ಮೋರ್ಹ್‌ ಬಳಿ ನದಿಯನ್ನು ದಾಟುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಅಧಿಕತ ಮೂಲಗಳು ತಿಳಿಸಿವೆ.