ಡ್ರಗ್ಸ್ ಮಾರುತ್ತಿದ್ದ ದೆಹಲಿ ಪೊಲೀಸ್‌‍ ಕಾನ್ಸ್‌ಟೇಬಲ್‌ ಬಂಧನ
ನವದೆಹಲಿ, ಜು.12 (ಪಿಟಿಐ)ರಾಷ್ಟ್ರ ರಾಜಧಾನಿ ಮತ್ತು ಅದರ ನೆರೆಹೊರೆಯ ನಗರಗಳಲ್ಲಿ ಮಾದಕ ದ್ರವ್ಯಗಳನ್ನು ಸರಬರಾಜು ಮಾಡುವ ಕಾರ್ಟೆಲ್‌ನ ಭಾಗವಾಗಿದ್ದ ಆರೋಪದ ಮೇಲೆ ಸಂಚಾರ ಘಟಕದಲ್ಲಿ ನಿಯೋಜಿಸಲಾದ ದೆಹಲಿ ಪೊಲೀಸ್‌‍ ಪೇದೆ ಮತ್ತು ಆತನ ಸಹಚರನನ್ನು ಬಂಧಿಸಲಾಗಿದೆ.
ದೆಹಲಿ ಪೊಲೀಸ್‌‍ ವಿಶೇಷ ಕೋಶದ ತಂಡವು ಜಾಫ್ರಾಬಾದ್‌ ಮೆಟ್ರೋ ನಿಲ್ದಾಣದ ಬಳಿ ಅವರನ್ನು ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಐಷಾರಾಮಿ ಕಾರಿನಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಒಂದು ಕಿಲೋಗ್ರಾಂ ಎಂಡಿಎಂಎ ಸರಬರಾಜು ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ ಮತ್ತು ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.