ಅಹಮದಾಬಾದ್‌-ವಡೋದರಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ, 6 ಮಂದಿ ಸಾವು
ಆನಂದ್‌ನಗರ, ಜು 15– ಗುಜರಾತ್‌ ರಾಜ್ಯದ ಆನಂದ್‌ ಪಟ್ಟಣದ ಸಮೀಪ ಅಹಮದಾಬಾದ್‌-ವಡೋದರಾ ಎಕ್ಸ್‌ಪ್ರೆಸ್‌ವೇಯಲ್ಲಿ ಇಂದು ಮುಂಜಾನೆ ವೇಗವಾಗಿ ಬಂದ ಟ್ರಕ್‌ ನಿಂತಿದ್ದ ಬಸ್‌‍ಗೆ ಡಿಕ್ಕಿ ಹೊಡೆದ ಪರಿಣಾಮ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಆರು ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಆನಂದ್‌ ಜಿಲ್ಲೆಯ ಚಿಖೋದ್ರಾ ಗ್ರಾಮದ ಬಳಿ ಮುಂಜಾನೆ 4.30 ರ ಸುಮಾರಿಗೆ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಅಹಮದಾಬಾದ್‌ ಕಡೆಗೆ ತೆರಳುತ್ತಿದ್ದ ಖಾಸಗಿ ಐಷಾರಾಮಿ ಬಸ್‌‍ ಟೈರ್‌ ಒಡೆದ ನಂತರ ರಸ್ತೆ ಬದಿಯಲ್ಲಿ ನಿಂತಿದ್ದಾಗ ಹಿಂದಿನಿಂದ ಬಂದ ಟ್ರಕ್‌ ದುದ್ದಿದೆ.ಈ ವೇಳೆ ಟೈರ್‌ ಬದಲಾಯಿಸುತ್ತಿರುವಾಗ, ಬಸ್‌‍ ಪ್ರಯಾಣಿಕರು ಇಳಿದರು ಮತ್ತು ಅವರಲ್ಲಿ ಕೆಲವರು ವಾಹನದ ಮುಂದೆ ಕಾಯುತ್ತಿದ್ದರು ಎಂದು ತಿಳಿದುಬಂದಿದೆ.
ಬಸ್‌‍ ಚಾಲಕ ಸೇರಿ ಐವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಒಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು, ಪೊಲೀಸರ ಪ್ರಕಾರ,ಮೃತರಲ್ಲಿ ಮೂವರು ಮಹಿಳೆಯರು ಇದ್ದಾರೆ ಸುಮಾರು 6 ಮಂದಿ ಗಾಯಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.