  2024   : ಕೇಂದ್ರ ಬಜೆಟ್ ಹೈಲೆಟ್ಸ್
ನವದೆಹಲಿ,ಜು.23-ವಿಕಸಿತ ಭಾರತದ ಸಹಕಾರಕ್ಕಾಗಿ ಸುಸ್ಥಿರ ಪ್ರಯತ್ನದ 9 ಆದ್ಯತಾ ವಲಯಗಳಲ್ಲಿ ಗುರುತಿಸುವ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ಮಂಡಿಸಿದರು. ಮುಂಗಾರು ಅಧಿವೇಶನದ ಆರಂಭದ ಮೊದಲ ದಿನವಾದ ಇಂದು ಸತತವಾದ ತಮ್ಮ 7ನೇ ಬಜೆಟ್ ಅನ್ನು ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರು, ಬಹಳಷ್ಟು ಅವಕಾಶಗಳ ಸೃಷ್ಟಿಗಾಗಿ 9 ಆದ್ಯತಾ ವಲಯಗಳನ್ನು ಗುರುತಿಸಿದ್ದಾರೆ.