ಸತ್ಯಮೇವ ಜಯತೇ, ಓಂ ನಮೋ ವೆಂಕಟೇಶಾಯ : ಆಂಧ್ರ ಸಿಎಂ ಟ್ವೀಟ್‌
   '        
ವಿಶಾಖಪಟ್ಟಣ,ಅ.4-ಸತ್ಯಮೇವ ಜಯತೇ. ಓಂ ನಮೋ ವೆಂಕಟೇಶಾಯ…!ತಿರುಪತಿ ಲಡ್ಡು ವಿವಾದ ಕುರಿತಂತೆ ಸುಪ್ರೀಂಕೋರ್ಟ್‌ ಸ್ವತಂತ್ರ ಎಸ್‌‍ಐಟಿ ರಚನೆಗೆ ಆದೇಶ ನೀಡಿರುವ ತೀರ್ಪಿನ ಕುರಿತು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಾಡಿರುವ ಟ್ವೀಟ್‌ ಇದು.
     ’     ,    ,             . .  .
ಸುಪ್ರೀಂಕೋರ್ಟ್‌ ತೀರ್ಪು ನೀಡುತ್ತಿದ್ದಂತೆ ತಮ ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್‌ ಮಾಡಿ, ಸತ್ಯಮೇವ ಜಯತೆ. ಓಂ ನಮೋ ವೆಂಕಟೇಶಾಯ ಎಂದು ಬರೆದುಕೊಂಡಿದ್ದಾರೆ.
ತಿರುಪತಿ ಲಡ್ಡು ಕಲಬೆರಕೆ ಪ್ರಕರಣದ ತನಿಖೆಗೆ ಸಿಬಿಐ, ಎಪಿ ಪೊಲೀಸ್‌‍ ಮತ್ತು ಎಫ್‌ಎಸ್‌‍ಎಸ್‌‍ಎಐ ಅಧಿಕಾರಿಗಳನ್ನೊಳಗೊಂಡ ಎಸ್‌‍ಐಟಿಯನ್ನು ಸ್ಥಾಪಿಸುವ ಗೌರವಾನ್ವಿತ ಸುಪ್ರೀಂಕೋರ್ಟ್‌ನ ಆದೇಶವನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.