ಸಾಕ್ಷ್ಯ ನಾಶ ಮಾಡಿದ ಸಂಸತ್ತಿನಲ್ಲಿ ಸ್ಮೋಕ್ ದಾಳಿಯ ಮಾಸ್ಟರ್ ಮೈಂಡ್ ಲಲಿತ್ ಝಾ
ನವದೆಹಲಿ,ಡಿ.15- ಸಂಸತ್ ಮೇಲಿನ ದಾಳಿಯ ಮಾಸ್ಟರ್ ಮೈಂಡ್ ಲಲಿತ್ ಝಾ ತಮ್ಮ ಬಳಿ ಇದ್ದ ಸಾಕ್ಷ್ಯ ಸಂಪೂರ್ಣ ನಾಶಪಡಿಸಿದ್ದಾರೆ ಎನ್ನಲಾಗಿದೆ.ಸಂಸತ್ ಮೇಲೆ ದಾಳಿ ಮಾಡಿದ ನಾಲ್ವರು ಸಹಚರರ ಮೊಬೈಲ್ ಫೋನ್‍ಗಳನ್ನು ಅವರು ಸುಟ್ಟು ಹಾಕಿದ್ದಾರೆ ಎಂದು ದೆಹಲಿ ಪೊಲೀಸ್ ಮೂಲಗಳು ತಿಳಿಸಿವೆ.
ಕಳೆದ ರಾತ್ರಿ ಪೊಲೀಸರಿಗೆ ಶರಣಾದ ಝಾ, ಹಳದಿ ಹೊಗೆ ಡಬ್ಬಿಗಳನ್ನು ಹಾಕಿದ ಇಬ್ಬರ ಮೊಬೈಲ್ ಫೋನ್‍ಗಳನ್ನು ಲೋಕಸಭೆಯ ಒಳಗೆ ಇಟ್ಟುಕೊಂಡಿದ್ದೆ ನಂತರದ ಘಟನೆಯನ್ನು ಚಿತ್ರೀಕರಿಸಿ ಕ್ಲಿಪ್ ಅನ್ನು ಇನ್‍ಸ್ಟಾಗ್ರಾಮ್‍ಗೆ ಅಪ್‍ಲೋಡ್ ಮಾಡಿ ಅಲ್ಲಿಂದ ಪರಾರಿಯಾಗಿದ್ದೇ ಎಂದು ಆತ ತಪ್ಪೊಪ್ಪಿಕೊಂಡಿದ್ದಾನೆ.
ಸುವರ್ಣಸೌಧದಲ್ಲಿ ಜಾರಿ ಬಿದ್ದ ಶಾಸಕ, ಸದನದಲ್ಲಿ ಸ್ವಾರಸ್ಯಕರ ಚರ್ಚೆ
ಪಲಾಯನ ಮಾಡುವ ಮೊದಲು ಮಾಧ್ಯಮ ಪ್ರಸಾರವನ್ನು ಖಚಿತಪಡಿಸಿಕೊಳ್ಳಲು ಕೋಲ್ಕತ್ತಾ ಮೂಲದ ಎನ್‍ಜಿಒಗೆ ಕಳುಹಿಸಿದ್ದೇನೆ ಎಂದು ಝಾ ಪೊಲೀಸರಿಗೆ ತಿಳಿಸಿದ್ದಾರೆ. ಇಬ್ಬರು ಸ್ನೇಹಿತರೊಂದಿಗೆ ಇರಲು ರಾಜಸ್ಥಾನದ ನಾಗೌರ್‍ಗೆ ಪ್ರಯಾಣಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಲಲಿತ್ ಝಾ ಮತ್ತು ಮತ್ತೊಬ್ಬ ವ್ಯಕ್ತಿ ಮಹೇಶ್ ನಿನ್ನೆ ಸಂಜೆ ದೆಹಲಿಗೆ ಮರಳಿ ನಂತರ ಝಾ ಕೇಂದ್ರ ದೆಹಲಿಯ ಪೊಲೀಸ್ ಠಾಣೆಗೆ ಶರಣಾದರು.
ಕೋಲ್ಕತ್ತಾದ ಶಿಕ್ಷಕ ಲಲಿತ್ ಝಾ ಅವರನ್ನು ಬಂಸಿ ದೆಹಲಿ ಪೊಲೀಸರ ವಿಶೇಷ ಸೆಲ್‍ಗೆ ಹಸ್ತಾಂತರಿಸಲಾಗಿದ್ದು ಪೊಲೀಸರು ಫೋನ್‍ಗಳನ್ನು ಸುಟ್ಟು ಹಾಕಿರುವ ಅವರ ಹೇಳಿಕೆಯನ್ನು ಪರಿಶೀಲಿಸುತ್ತಿದ್ದಾರೆ. ಷಡ್ಯಂತ್ರದ ಸಂಪೂರ್ಣ ಮಾಹಿತಿ ಹೊಂದಿರುವ ಮಹೇಶ್ ನನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.