ನೀಲಿ ಬಣ್ಣದ ಸೀರೆಯಲ್ಲಿ ಮಿಂಚಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ನವದೆಹಲಿ,ಫೆ.1- ಕೇಂದ್ರ ಸರ್ಕಾರದ ಸತತ 6ನೇ ಬಾರಿಗೆ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿ ನೀಲಿಬಣ್ಣದ ಸೀರೆ ಧರಿಸಿದ್ದು ವಿಶೇಷವಾಗಿತ್ತು. ಬಜೆಟ್ ಮಂಡನೆಗೂ ರಾಷ್ಟ್ರಪತಿ ದ್ರೌಪದಿ ಮುರ್ಮ ಹಾಗೂ ಹಣಕಾಸು ಸಚಿವಾಲಯದ ಕಚೇರಿಗೆ ಆಗಮಿಸಿದ್ದ ನಿರ್ಮಲಾ ಸೀತಾರಾಮನ್ ನೀಲಿ ಹಾಗೂ ಕೆನೆಬಣ್ಣದ ಸೀರೆ ಧರಿಸಿದ್ದರು. ನಂತರ ಸಂಸತ್ತಿನಲ್ಲಿ ಬಜೆಟ್ ಪುಸ್ತಕ ಓದುವಾಗಲೂ ಅದೇ ರಿಸಿನಲ್ಲಿದ್ದರು.
ಈ ಬಾರಿಯ ಬಜೆಟ್‍ನಲ್ಲಿ ನಿರ್ಮಲಾ ಅವರು ಧರಿಸುವ ಸೀರೆ ಸಂಪೂರ್ಣ ನೀಲಿ ಬಣ್ಣದ್ದಾಗಿದ್ದು, ಮಧ್ಯದಲ್ಲಿ ಕೆನೆ ಬಣ್ಣದ ಚಿತ್ತಾರವಿದೆ. ಬಳ್ಳಿ ಹಾಗೂ ಎಲೆಗಳಿಂದ ಕೂಡಿರುವ ಚಿತ್ತಾರವನ್ನು ಸೀರೆಯಲ್ಲಿ ಕಾಣಬಹುದಾಗಿದೆ. ಇದರೊಂದಿಗೆ ಸೀರೆಗೊಪ್ಪುವ ಕೆನೆ ಬಣ್ಣದ ಮ್ಯಾಚಿಂಗ್ ಬ್ಲೌಸ್ ಧರಿಸಿದ್ದರು.
ಸತತವಾಗಿ 6 ಬಾರಿ ಬಜೆಟ್ ಮಂಡಿಸಿ ನಿರ್ಮಲಾ ದಾಖಲೆ
ಪ್ರತಿ ಬಾರಿ ಬಜೆಟ್‍ನಲ್ಲೂ ನಿರ್ಮಲಾ ಸೀತಾರಾಮನ್ ಅವರು ಮಂಡಿಸುವ ಬಜೆಟ್ ಜೊತೆಗೆ ಅವರ ಸೀರೆ ಕೂಡ ಸುದ್ದಿಯಾಗುತ್ತಿತ್ತು. ನಿರ್ಮಲಾ ಸೀತಾರಾಮನ್ ಅವರ ಭಾರತೀಯ ಜವಳಿಗಳ ಮೇಲಿನ ಪ್ರೀತಿ ಅಪಾರ. ಅವರು ಯಾವಾಗಲೂ ಸ್ಥಳೀಯ ಕೈಮಗ್ಗಗಳನ್ನು ಬಳಸುವಂತೆ ಕರೆ ನೀಡುತ್ತಾರೆ.
ಕಳೆದ ವರ್ಷದ ಬಜೆಟ್‍ನಲ್ಲಿ (2023ರದ್ದು) ಅವರು ಕೆಂಪು ಬಣ್ಣದ ಇಳಕಲ್ ಸೀರೆ ತೊಟ್ಟು ಮಿಂಚಿದ್ದರು. ಈ ಬಾರಿಯ ಮಧ್ಯಂತರ ಬಜೆಟïನಲ್ಲಿ ಅವರು ನೀಲಿ ಮತ್ತು ಕ್ರೀಮ್ ಬಣ್ಣದ ಛಾಯೆ ಇರುವ ಸೀರೆ (     ) ತೊಟ್ಟಿದ್ದಾರೆ.
ನಿರ್ಮಲಾ ಸೀತಾರಾಮನ್ ಈ ಬಾರಿ ತೊಟ್ಟಿರುವ ನೀಲಿ ಬಣ್ಣದ ಸೀತೆ ತುಸ್ಸಾರ್ ರೇಷ್ಮೆಯದ್ದು. ಪಶ್ಚಿಮ ಬಂಗಾಳ, ಬಿಹಾರ, ಝಾರ್ಖಂಡ್, ಒಡಿಶಾ ಪ್ರದೇಶಗಳಲ್ಲಿ ಸಿಗುವ ರೇಷ್ಮೆಯಿಂದ ಈ ಸೀರೆ ನೇಯಲಾಗುತ್ತದೆ.