ಹೆಣ್ಣು ಶಿಶುವಿಗೆ ವಿಷವಿಟ್ಟು ಹತ್ಯೆ ಮಾಡಿದ ಪಾಪಿ ಪೋಷಕರು
    9-- ,    ; 
ಚೆನ್ನೈ,ಸೆ.9-ಎರಡನೆಯದು ಹೆಣ್ಣು ಮಗುವಾಯಿತು ಎಂದು ಪೋಷಕರು ತಮ 9 ದಿನದ ಹಸುಗೂಸಿಗೆ ವಿಷ ಹಾಕಿ ಹತ್ಯೆ ಮಾಡಿ ಶವವನ್ನು ಹೂತು ಹಾಕಿದ್ದ ಘಟನೆ ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದಿದೆ.ಮೊದಲನೆಯದ್ದು ಹೆಣ್ಣುಮಗುವಿತ್ತು, ಈಗ ಎರಡನೆಯದೂ ಹೆಣ್ಣಾಗಿದೆ ಅದು ತಮಗೆ ಬೇಡ ಎಂದು ಹೇಳಿ ಶಿಶುವಿಗೆ ವಿಷ ಉಣಿಸಿ ಹೆತ್ತವರೇ ಕೊಲೆ ಮಾಡಿದ್ದು ಪಾಪಿ ಪೋಷಕರನ್ನು ಪೊಲೀಸರು ಬಂಧಿಸಿದ್ದಾರೆ.
ಈಗಾಗಲೇ ಎರಡು ವರ್ಷದ ಮಗಳನ್ನು ಹೊಂದಿರುವ ಜೀವಾ ಮತ್ತು ಡಯಾನಾ ದಂಪತಿಗೆ ಆ. 27ರಂದು ಎರಡನೇ ಹೆಣ್ಣುಮಗು ಹುಟ್ಟಿತ್ತು. ಡಯಾನಾ ಹೆರಿಗೆಯ ಸಮಯದಲ್ಲಿ ತೊಂದರೆಯಾದ ಕಾರಣ ವೆಲ್ಲೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಡಿಸ್ಚಾರ್ಜ್‌ ಆಗಿದ್ದು ಮನೆಗೆ ಮರಳಿದ ನಂತರ, ದಂಪತಿ ತಮ ನವಜಾತ ಶಿಶುವಿಗೆ ವಿಷಪೂರಿತ ಹಾಲನ್ನು ಕುಡಿಸಿದ್ದಾರೆ. ಮಗು ಸಾವನ್ನಪ್ಪಿದಾಗ, ಯಾವುದೇ ಸಂಬಂಧಿಕರಿಗೆ ತಿಳಿಸದೆ ಆಕೆಯ ಶವವನ್ನು ತಮ ಹಿತ್ತಲಿನಲ್ಲಿಯೇ ಹೂತಿದ್ದರು.
╰┈➤      
ಡಯಾನಾ ತನ್ನ ತಂದೆಗೆ ಕರೆ ಮಾಡಿ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮತಪಟ್ಟಿದೆ ಎಂದು ಹೇಳಿದ್ದಾಳೆ. ಆಗ ಅವರ ತಂದೆಗೆ ಅನುಮಾನ ಬಂದಿದೆ, ಮಗುವಿನ ಅನುಮಾನಾಸ್ಪದ ಸಾವಿನ ಕುರಿತು ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರು ಆಗಮಿಸಿ ತನಿಖೆ ನಡೆಸಿದಾಗ ದಂಪತಿ ಮನೆಯಿಂದ ಪರಾರಿಯಾಗಿರುವುದು ಕಂಡು ಬಂದಿದೆ. ಮರಣೋತ್ತರ ಪರೀಕ್ಷೆ ನಡೆಸಲು ಜಿಲ್ಲಾಧಿಕಾರಿ ಸಮುಖದಲ್ಲಿ ಸೆ.5ರಂದು ಮಗುವಿನ ಮತದೇಹವನ್ನು ಅಧಿಕಾರಿಗಳು ಹೊರತೆಗೆದಿದ್ದಾರೆ.
ಪೋಷಕರನ್ನು ಪತ್ತೆಹಚ್ಚಲು ವೆಲ್ಲೂರು ಪೊಲೀಸರು ವಿಶೇಷ ತಂಡಗಳನ್ನು ರಚಿಸಿದರು ಮತ್ತು ಅಂತಿಮವಾಗಿ ಇಬ್ಬರೂ ಶಂಕಿತರನ್ನು ಬಂಧಿಸಲಾಯಿತು. ತನಿಖೆ ಮುಂದುವರಿದಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.