ಭಾರತೀಯ ಆರ್ಥಿಕತೆ ಕುರಿತ ಶ್ವೇತಪತ್ರದ ಮುಖ್ಯಾಂಶಗಳು
ಯುಪಿಎ ಸರ್ಕಾರವು ಹೆಚ್ಚು ಸುಧಾರಣೆಗಳಿಗೆ ಸಿದ್ಧವಾಗಿದ್ದ ಆರೋಗ್ಯಕರ ಆರ್ಥಿಕತೆಯನ್ನು ಪಡೆದುಕೊಂಡಿತು, ಆದರೆ ಅದನ್ನು ತನ್ನ 10 ವರ್ಷಗಳಲ್ಲಿ ಅದಕ್ಷವನ್ನಾಗಿ ಮಾಡಿತು.
2008 ರ ಜಾಗತಿಕ ಆರ್ಥಿಕ ಬಿಕ್ಕಟ್ಟು () ಭಾರತದ ಮೇಲೆ ಕೆಟ್ಟ ಪರಿಣಾಮ ಬೀರಲಿಲ್ಲ
‌
ಒಂದುದಶಕದಲ್ಲಿದುರ್ಬಲ ಐದು ಆರ್ಥಿಕತೆಗಳಲ್ಲಿ ಒಂದಾಗಿದ್ದ ಭಾರತ ಈಗ ಅಗ್ರ ಐದರ ಸ್ಥಾನದಲ್ಲಿ
2012-13 ಮತ್ತು 2021-22 ರಲ್ಲಿ ಭಾರತದ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳ ಸ್ಥಿತಿ
ಮಾಹಿತಿ ಮೂಲ: ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಪ್ರಮುಖ ಅನುಪಾತಗಳು (ಅಂಕಿಅಂಶಗಳು ಶೇ.)
ಹೂಡಿಕೆದಾರರ ಪ್ರವೃತ್ತಿಗಳ   ಪುನರುಜ್ಜೀವನ
ಸಬಲೀಕರಣ ಮತ್ತು ಪರಿಣಾಮಕಾರಿ ವಿತರಣೆಯ ಮೂಲಕ ಸಾರ್ವಜನಿಕ ಕಲ್ಯಾಣ:
ಸಾರ್ವಜನಿಕ ಹಣಕಾಸು: ದಯನೀಯ ಸ್ಥಿತಿಯಿಂದ  ಉತ್ತಮ ಸ್ಥಿತಿಗೆ ಪಯಣ
-ಆರ್ಥಿಕತೆಯು ಸಮರ್ಥನೀಯವಲ್ಲದ ದರದಲ್ಲಿ ವಿಸ್ತರಿಸದೆ ಆರ್ಥಿಕ ವರ್ಷ 2014ರಿಂದ 2024ರವರೆಗೆ(ಪರಿಷ್ಕೃತ ಅಂದಾಜು) ಪೂರ್ಣಾಂಕದಲ್ಲಿ ಬಜೆಟ್ ಬಂಡವಾಳ ವೆಚ್ಚ ಐದು ಪಟ್ಟು ಹೆಚ್ಚಾಗಿದೆ.
2015ರಿಂದ 2024ರ ಅವಧಿಯಲ್ಲಿ ಬಂಡವಾಳ ವೆಚ್ಚಕ್ಕೆ ಒತ್ತು
-ಹೆಚ್ಚಿನ ಬೆಳವಣಿಗೆಯ ಅವಧಿಯಲ್ಲಿ (ಆವರ್ತಕ ಪರ) ಬಜೆಟ್‌ಗಳನ್ನು ವಿಸ್ತರಿಸುವ ಯುಪಿಎ ಸರ್ಕಾರದ ವಿಧಾನಕ್ಕೆ ವ್ಯತಿರಿಕ್ತವಾಗಿ, ಪ್ರಸ್ತುತ ಸರ್ಕಾರವು ಜಿಡಿಪಿ ಬೆಳವಣಿಗೆಯ ಗರಿಷ್ಠ ಆವರ್ತನ ಸಮಯದಲ್ಲಿ ಬಜೆಟ್ ಗಾತ್ರವನ್ನು ಒಳಗೊಂಡಿರುವ ವಿವೇಚನಾಶೀಲ ಹಣಕಾಸಿನ ನೀತಿಯನ್ನು ಅನುಸರಿಸಿ ಯಾವುದೇ ನಿರ್ವಹಣೆಗೆ ಅನಿರೀಕ್ಷಿತ ಸಂದರ್ಭಗಳು ಎದುರಾದ ಸಂದರ್ಭದಲ್ಲಿ ಸಾಕಷ್ಟು ಹಣಕಾಸಿನ ಸ್ಥಳವನ್ನು ಸೃಷ್ಟಿಸಿದೆ.
ಕಳೆದ ದಶಕದಲ್ಲಿ ದೃಢವಾದ ಆದಾಯದ ಬೆಳವಣಿಗೆಯೊಂದಿಗೆ ಸುಧಾರಿತ ತೆರಿಗೆ-ಪರಿಸರ ವ್ಯವಸ್ಥೆ
ಸರಕು ಮತ್ತು ಸೇವಾ ತೆರಿಗೆ() ಆಡಳಿತದ ಪರಿಚಯವು ಇಂದಿಗೆ ಹೆಚ್ಚು ಅತ್ಯಗತ್ಯವಾದ ರಚನಾತ್ಮಕ ಸುಧಾರಣೆಯಾಗಿದೆ. ಸರಕು ಮತ್ತು ಸೇವಾ ತೆರಿಗೆ () ಪರಿಚಯಿಸುವ ಮೊದಲು, 440 ಕ್ಕಿಂತ ಹೆಚ್ಚು ತೆರಿಗೆ ದರಗಳು, ಅಬಕಾರಿ ಸುಂಕಗಳು ಮತ್ತು ಈ ದರಗಳನ್ನು ನಿರ್ವಹಿಸುವ ಬಹು ಏಜೆನ್ಸಿಗಳ ಅನುಸರಣೆ ಅಗತ್ಯತೆಗಳು ಭಾರತದ ಆಂತರಿಕ ವ್ಯಾಪಾರವು ಮುಕ್ತವಾಗಿರಲಿಲ್ಲ ಅಥವಾ ಏಕೀಕೃತವಾಗಿರಲಿಲ್ಲ.
ಸುಧಾರಣೆಯ ಅನುಷ್ಠಾನವು 29 ರಾಜ್ಯಗಳು ಮತ್ತು 7 ಕೇಂದ್ರಾಡಳಿತ ಪ್ರದೇಶಗಳನ್ನು ಒಗ್ಗೂಡಿಸಿದ್ದು, ಅವುಗಳು ತಮ್ಮ ವಿಭಿನ್ನ ತೆರಿಗೆ ರಚನೆಗಳ ಕಾರಣದಿಂದಾಗಿ ತಮ್ಮದೇ ಆದ ಆರ್ಥಿಕ ಪ್ರದೇಶಗಳಾಗಿವೆ. ಹೊಸ ತೆರಿಗೆ ರಚನೆಯು ರಾಜಕೀಯ ಒಮ್ಮತದ ರಚನೆ ಮತ್ತು ಜಿಎಸ್ ಟಿ ಕೌನ್ಸಿಲ್‌ನ ಸಂಗ್ರಹ ಸಾರ್ವಭೌಮತ್ವದಿಂದ ನಿರೂಪಿಸಲ್ಪಟ್ಟಿದ್ದು, ಸಹಕಾರಿ ಸಂಯುಕ್ತ ವ್ಯವಸ್ಥೆಗೆ ಎರಡೂ ಪ್ರಮುಖ ಉದಾಹರಣೆಗಳಾಗಿವೆ. ಕಳೆದ ದಶಕದಲ್ಲಿ ದೂರಗಾಮಿ ತೆರಿಗೆ ಸುಧಾರಣೆಗಳು ಸುಧಾರಿತ ಆದಾಯ ಸಂಗ್ರಹಣೆ ಮತ್ತು ಅನುಸರಣೆಗಳನ್ನು ಹೊಂದಿರುವ ಪರಿಣಾಮಕಾರಿ ವ್ಯವಸ್ಥೆಗಳನ್ನು ಜಾರಿಗೆ ತಂದಿವೆ.
-ಆರ್ಥಿಕ ವರ್ಷ 2015ರಿಂದ ಆರ್ಥಿಕ ವರ್ಷ 2024ರವರೆಗೆ ಪರಿಷ್ಕ್ರಿತ ಅಂದಾಜಿನ ಸರಾಸರಿ ತೆರಿಗೆ-ಜಿಡಿಪಿ ಅನುಪಾತವು ಸುಮಾರು ಶೇಕಡಾ 10.9ರಷ್ಟಿದ್ದು, ಇದು 2004ರಿಂದ 2014 ರಲ್ಲಿ ಹತ್ತು ವರ್ಷಗಳ ಸರಾಸರಿ ಶೇಕಡಾ 10.5ಕ್ಕಿಂತ ಹೆಚ್ಚಾಗಿದೆ. ಕಡಿಮೆ ತೆರಿಗೆ ದರಗಳು ಮತ್ತು ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ವ್ಯಾಪಕವಾದ ಪರಿಹಾರವನ್ನು ವಿಸ್ತರಿಸಲಾಗಿದೆ.
ಡಿಸೆಂಬರ್ 2017 ರಿಂದ ಮಾರ್ಚ್ 2023 ರವರೆಗೆ ಕುಟುಂಬಗಳಿಗೆ ತಿಂಗಳಿಗೆ ಸುಮಾರು 45,000 ಕೋಟಿ ರೂಪಾಯಿ ಉಳಿಸಲು ಜಿಎಸ್ ಟಿ ಸಹಾಯ ಮಾಡಿದೆ ಎಂದು ಲೆಕ್ಕಾಚಾರ ತೋರಿಸುತ್ತದೆ. ಅದೇ ಸಮಯದಲ್ಲಿ, ಜಿಎಸ್ ಟಿಯಿಂದ ಮಾಸಿಕ ಸರಾಸರಿ ಆದಾಯವು ಆರ್ಥಿಕ ವರ್ಷ 2018 ರಲ್ಲಿ 90,000 ಕೋಟಿ ರೂಪಾಯಿಗಳಿಂದ ಆರ್ಥಿಕ ವರ್ಷ 2024 ರಲ್ಲಿ 1.7 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಅಭಿವೃದ್ಧಿಯಲ್ಲಿ ರಾಜ್ಯಗಳು ಸಮಾನ ಪಾಲುದಾರರು ಎಂಬುದನ್ನು ಒಪ್ಪಿಕೊಂಡು, ನಮ್ಮ ಸರ್ಕಾರವು ಸಹಕಾರಿ ಸಂಯುಕ್ತ ವ್ಯವಸ್ಥೆಯ ಮನೋಭಾವದಲ್ಲಿ 14 ಮತ್ತು 15 ನೇ ಹಣಕಾಸು ಆಯೋಗದ ಶಿಫಾರಸುಗಳನ್ನು ಒಪ್ಪಿಕೊಂಡಿದೆ.
ಎರಡು ಸರ್ಕಾರಗಳ ಆಡಳಿತದಲ್ಲಿ ರಾಜ್ಯಗಳಿಗೆ ವರ್ಗಾವಣೆಗಳ ಹೋಲಿಕೆ
-ಇದಲ್ಲದೆ, ಬದಲಾಗುತ್ತಿರುವ ಪರಿಸರ ಸ್ಥಿತಿಗತಿಗಳ ಸಮಯದಲ್ಲಿ ರಾಜ್ಯಗಳ ಜೊತೆ ಕೇಂದ್ರ ಸರ್ಕಾರ ದೃಢವಾಗಿ ನಿಂತಿದೆ.ಅಸಮರ್ಥತೆಗಳನ್ನು ಪರಿಹರಿಸಲು ಮತ್ತು ಕಲ್ಲಿದ್ದಲು ಕ್ಷೇತ್ರದಲ್ಲಿ ಪೈಪೋಟಿ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು, ಕಳೆದ ಹತ್ತು ವರ್ಷಗಳಲ್ಲಿ ನಮ್ಮ ಸರ್ಕಾರವು ಅನೇಕ ಸುಧಾರಣೆಗಳನ್ನು ಕೈಗೊಂಡಿದೆ.
-ಅಧಿಕಾರಕ್ಕೆ ಬಂದ ನಂತರ, ನಮ್ಮ ಸರ್ಕಾರವು ಕಲ್ಲಿದ್ದಲು ಸಂಪನ್ಮೂಲಗಳ ಪಾರದರ್ಶಕ ಹಂಚಿಕೆ ಮತ್ತು ದೇಶದ ಇಂಧನ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಕಲ್ಲಿದ್ದಲು ಗಣಿಗಳ (ವಿಶೇಷ ನಿಬಂಧನೆಗಳ () ಕಾಯಿದೆ 2015ನ್ನು ತ್ವರಿತವಾಗಿ ಜಾರಿಗೆ ತಂದಿತು. ಮೊದಲ ಬಾರಿಗೆ ಕಲ್ಲಿದ್ದಲು ನಿಕ್ಷೇಪಗಳ ಹರಾಜು, ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆ ಸೇರಿದಂತೆ ಕಲ್ಲಿದ್ದಲು ಸಂಪರ್ಕಗಳ ತರ್ಕಬದ್ಧಗೊಳಿಸುವಿಕೆ, ಕಲ್ಲಿದ್ದಲಿನ ಇ-ಹರಾಜಿಗೆ ಏಕ ಗವಾಕ್ಷಿ ಮಾರ್ಗ ಇತ್ಯಾದಿ ಹಲವು ಕ್ರಮಗಳನ್ನು ಒಳಗೊಂಡಿದೆ.
ಕಲ್ಲಿದ್ದಲು ವಲಯವನ್ನು ಸ್ವಚ್ಛಗೊಳಿಸಲು ನಮ್ಮ ಸರ್ಕಾರದ ಅವಿರತ ಪ್ರಯತ್ನಗಳ ಪರಿಣಾಮವಾಗಿ, ಆರ್ಥಿಕ ವರ್ಷ 2023 ರಲ್ಲಿ ಕಲ್ಲಿದ್ದಲು ಉತ್ಪಾದನೆಯು ದಾಖಲೆಯ ಮಟ್ಟ 893.19 ಮಿಲಿಯನ್ ಟನ್ ಗೆ ತಲುಪಿತು, ಇದು ಭಾರತದ ಇತಿಹಾಸದಲ್ಲಿ ಅತ್ಯಧಿಕವಾಗಿದೆ.
-ಆರ್ಥಿಕ ವರ್ಷ 2023ರಲ್ಲಿ ಕಲ್ಲಿದ್ದಲು ಉತ್ಪಾದನೆಯ ಮಟ್ಟವು ಆರ್ಥಿಕ ವರ್ಷ 2014 ರಲ್ಲಿ 565.77 ಮಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆಗಿಂತ ಸುಮಾರು ಶೇಕಡಾ 57.8ರಷ್ಟು ಬೆಳವಣಿಗೆಯನ್ನು ಸೂಚಿಸುತ್ತದೆ. ಆರ್ಥಿಕ ವರ್ಷ 2009 ರಿಂದ ಆರ್ಥಿಕ ವರ್ಷ 2014ರವರೆಗಿನ ಕಲ್ಲಿದ್ದಲು ಉತ್ಪಾದನೆಯ ಸಂಯುಕ್ತ ವಾರ್ಷಿಕ ಬೆಳವಣಿಗೆ ದರ() ಶೇಕಡಾ 2.8 ರಷ್ಟಿತ್ತು, ಇದೇ ರೀತಿ ಮುಂದುವರಿದಿದ್ದರೆ ಆರ್ಥಿಕ ವರ್ಷ 2023 ರಲ್ಲಿ ಕಲ್ಲಿದ್ದಲು ಉತ್ಪಾದನೆಯು 725.39 ಮಿಲಿಯನ್ ಟನ್ ಆಗುತ್ತಿತ್ತು.
ನಮ್ಮ ಸರ್ಕಾರವು ದೇಶದ ವಿದ್ಯುತ್ ವಲಯವನ್ನು ಬಾಧಿಸುತ್ತಿರುವ ಬಹು ಸಮಸ್ಯೆಗಳನ್ನು ಪರಿಹರಿಸಿದೆ, ಈ ಮೂಲಕ ವಿದ್ಯುತ್ ಕೊರತೆಯಿಂದ ಸಾಕಷ್ಟು ವಿದ್ಯುತ್ ಉತ್ಪಾದನೆ ಸ್ಥಿತಿಗೆ ಬದಲಾವಣೆ ಕಂಡಿದೆ.
ದೂರಸಂಪರ್ಕ ವಲಯದಲ್ಲಿ ಉತ್ತಮ ಆಡಳಿತ
2014 ರಿಂದ, ನಮ್ಮ ಸರ್ಕಾರವು ದೂರಸಂಪರ್ಕ ಮಾರುಕಟ್ಟೆಯಲ್ಲಿನ ಪರಿಸ್ಥಿತಿಯನ್ನು ಸರಿಪಡಿಸಲು ಮತ್ತು ಈ ವಲಯದಲ್ಲಿನ ನೀತಿಯಲ್ಲಿ ಸ್ಪಷ್ಟತೆಯ ಕೊರತೆಯಿಂದ ಉಂಟಾದ ವೈಫಲ್ಯಗಳನ್ನು ಬಗೆಹರಿಸಿ ಪರಿಣಾಮಕಾರಿಯಾಗಿ ನಿರ್ವಹಿಸಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಇದು ಸ್ಪೆಕ್ಟ್ರಮ್ ಹರಾಜು, ವ್ಯಾಪಾರ ಮತ್ತು ಹಂಚಿಕೆಯ ಪಾರದರ್ಶಕ ವಿಧಾನಗಳನ್ನು ತಂದು ಸ್ಪೆಕ್ಟ್ರಮ್‌ನ ಅತ್ಯುತ್ತಮ ಬಳಕೆಯನ್ನು ಮತ್ತಷ್ಟು ಸಕ್ರಿಯಗೊಳಿಸಿತು. 2022ರ 5ಜಿ ಹರಾಜು, ಟೆಲಿಕಾಂ ಸೇವಾ ಪೂರೈಕೆದಾರರಿಗೆ () ಒಟ್ಟಾರೆ ಸ್ಪೆಕ್ಟ್ರಮ್ ಲಭ್ಯತೆಯನ್ನು ಹೆಚ್ಚಿಸಿ ಇದುವರೆಗಿನ ಅತ್ಯಧಿಕ ಪ್ರಮಾಣದ ಸ್ಪೆಕ್ಟ್ರಮ್ ನ್ನು, ಅಂದರೆ, 52 , ಅತ್ಯಧಿಕ ಹರಾಜು ಮೌಲ್ಯ ಕಂಡಿದೆ.
-ಅಲ್ಲದೆ, ಟಿಎಸ್ ಪಿಗಳಿಗೆ ಆರೋಗ್ಯಕರ ನಗದು ಹರಿವು 5ಜಿ ತಂತ್ರಜ್ಞಾನದಲ್ಲಿ ಬಂಡವಾಳ ಹೂಡಿಕೆಗಳನ್ನು ಮಾಡಲು ಅನುವು ಮಾಡಿಕೊಟ್ಟಿತು, ಇದು ದೇಶದಲ್ಲಿ 5ಜಿ ಸಂಪರ್ಕಜಾಲದ ಅನಾವರಣಕ್ಕೆ ಕಾರಣವಾಯಿತು, ಭಾರತ ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ 5ಜಿ ತಂತ್ರಜ್ಞಾನ ಜಾರಿಗೆ ತಂದ ದೇಶ ಎಂದು ಗುರುತಿಸಲ್ಪಟ್ಟಿದೆ. ಈ ಎಲ್ಲಾ ಕ್ರಮಗಳ ಪರಿಣಾಮಕಾರಿತ್ವವು ಎಲ್ಲಾ ಟೆಲಿಕಾಂ ಸೇವಾ ಪೂರೈಕೆದಾರರ ಹೆಚ್ಚುತ್ತಿರುವ ಸಂಚಿತ ಒಟ್ಟು ಆದಾಯದಲ್ಲಿ ಪ್ರತಿಫಲಿಸುತ್ತದೆ, ಇದು ಈಗಾಗಲೇ 3 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ.
