ಮದುವೆ ಸಮಾರಂಭದಲ್ಲಿ ಗುಂಡಿಕ್ಕಿ ಬಿಎಸ್‍ಪಿ ನಾಯಕನ ಹತ್ಯೆ
ಛತ್ತರ್‍ಪುರ, ಮಾ.5: ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಛತ್ತರ್‍ಪುರಕ್ಕೆ ಬಂದಿದ್ದ ಬಹುಜನ ಸಮಾಜ ಪಕ್ಷದ (ಬಿಎಸ್‍ಪಿ) ನಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ತಡ ರಾತ್ರಿ ನಗರದ ರೆಸಾರ್ಟ್‍ನಲ್ಲಿ ನಡೆಯುತ್ತಿದ್ದ ಮದುವೆ ಬಂದಿದ್ದ ಬಿಎಸ್‍ಪಿ ನಾಯಕ ಮಹೇಂದ್ರ ಗುಪ್ತಾ ಅವರ ಮೇಲೆ ಬೈಕ್‍ನಲ್ಲಿ ಬಂದ ದುಷ್ಕರ್ಮಿ ಗುಂಡು ಹಾರಿಸಲಾಗಿದೆ.
ಸಾಗರ್ ರಸ್ತೆಯ ಅವರು ಬರುವಾಗ ಈ ಘಟನೆ ನಡೆದಿದೆ,ಗುಪ್ತಾ ಅವರ ತಲೆಗೆ ಗುಂಡು ತಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಂಘಿ ತಿಳಿಸಿದ್ದಾರೆ. ಕಳೆದ 2023ರ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜಾವರ್ ಕ್ಷೇತ್ರದಿಂದ ಬಿಎಸ್‍ಪಿ ಅಭ್ಯರ್ಥಿಯಾಗಿ ಸ್ರ್ಪಧಿಸಿ ಸೋಲುಕಂಡಿದ್ದರು ಆದರು 10,400 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದಿದ್ದರು.
ಮೋಟಾರು ಸೈಕಲ್‍ನಲ್ಲಿ ಬಂದ ವ್ಯಕ್ತಿಯಿಂದ ಏಕಾಏಕಿ ಗುಂಡು ಹಾರಿಸಿದ್ದಾರೆ ಎಂದು ಗುಪ್ತಾ ಅವರ ಖಾಸಗಿ ಭದ್ರತಾ ಸಿಬ್ಬಂದಿ ಅಬ್ದುಲ್ ಮನ್ಸೂರಿ ಹೇಳಿದ್ದಾರೆ ತನ್ನ ರೈಫಲ್ ಅನ್ನು ಲೋಡ್ ಮಾಡುವ ಹೊತ್ತಿಗೆ ಓಡಿಹೋದನು, ದಾಳಿಕೋರನನ್ನು ನೋಡಿದ್ದೇನೆ ಮತ್ತು ಅವನನ್ನು ಗುರುತಿಸುತ್ತೇನೆ ಎಂದು ವಿಚಾರಣೆ ವೇಳೆ ಪೊಲೀಸರ ಮುಂದೆ ಹೇಳಿದ್ದಾರೆ. ಹಂತಕನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.