ರಸ್ತೆ ಬದಿ ಕುಳಿತ್ತಿದ್ದವರ ಮೇಲೆ ಪಿಕಪ್‌ ಟ್ರಕ್‌ ಹರಿದು ನಾಲ್ವರ ಸಾವು
: 4 , 5         
ಸಂಭಾಲ್‌ (ಯುಪಿ), ಸೆ 16 (ಪಿಟಿಐ)ಇಂದು ಬೆಳಗ್ಗೆ ಇಲ್ಲಿ ವೇಗವಾಗಿ ಬಂದ ಪಿಕಪ್‌ ಟ್ರಕ್‌ ರಸ್ತೆ ಬದಿ ಕುಳಿತ್ತಿದ್ದವರ ಮೇಲೆ ಹರಿದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಅಲಿಗಢಕ್ಕೆ ಕಳುಹಿಸಲಾಗಿದ್ದು, ವಾಹನದ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಭೋಪತ್‌ಪುರ ಗ್ರಾಮದ ಕೆಲವರು ರಸ್ತೆ ಬದಿ ಕುಳಿತಿದ್ದಾಗ ಗಾವಾದಿಂದ ಎದುರಿಗೆ ಬರುತ್ತಿದ್ದ ವಾಹನವೊಂದು ಅವರಿಗೆ ಅತಿವೇಗದಲ್ಲಿ ಡಿಕ್ಕಿ ಹೊಡೆದಿದ್ದು, ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್‌‍ ವರಿಷ್ಠಾಧಿಕಾರಿ ಕ್ರಿಶನ್‌ ಕುಮಾರ್‌ ತಿಳಿಸಿದ್ದಾರೆ.
ಮತರನ್ನು ಲೀಲಾಧರ್‌ (60), ಧರಮಲ್‌ (40), ಓಂಪಾಲ್‌ (32), ಮತ್ತು ಪುರಾನ್‌ ಸಿಂಗ್‌ (45) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ತಕ್ಷಣವೇ ರಾಜಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು, ಅಲ್ಲಿಂದ ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಅಲಿಗಢಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.