ರಾಮಮಂದಿರಕ್ಕೆ ಭೇಟಿ ನೀಡಿದ ಕೇರಳ ರಾಜ್ಯಪಾಲ ಆರಿಫ್‌ ಮೊಹಮದ್‌
ಅಯೋಧ್ಯೆ,ಮೇ.9-ಕೇರಳ ರಾಜ್ಯಪಾಲ ಆರಿಫ್‌ ಮೊಹಮದ್‌ ಖಾನ್‌ ಅವರು ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿ ದೇವರಿಗೆ ನಮಿಸಿದರು.ಕೇರಳ ರಾಜಭವನದ ಎಕ್ಸ್ ನಲ್ಲಿನ ಪೋಸ್ಟ್‌ನಲ್ಲಿ ರಾಜ್ಯಪಾಲರು ರಾಮ ಮಂದಿರಕ್ಕೆ ಭೇಟಿ ನೀಡಿ ದರ್ಶನ ಪಡೆದ ಬಗ್ಗೆ ಮಾಹಿತಿ ನೀಡಲಾಗಿದೆ.
ಜನವರಿಯಲ್ಲಿ ಎರಡು ಬಾರಿ ಅಯೋಧ್ಯೆಗೆ ಬಂದ್ದೆಿ. ಅಂದಿನ ಭಾವನೆ ಇಂದಿಗೂ ಹಾಗೆಯೇ ಇದೆ. ನಾನು ಅಯೋಧ್ಯೆಗೆ ಹಲವು ಬಾರಿ ಬಂದಿದ್ದೇನೆ. ಇದು ನಮಗೆ ಸಂತೋಷದ ವಿಷಯವಲ್ಲ, ಬದಲಾಗಿ ಹೆಮೆಯ ವಿಷಯವಾಗಿದೆ. ಅಯೋಧ್ಯೆ ಮತ್ತು ಶ್ರೀರಾಮನನ್ನು ಪೂಜಿಸುತ್ತಿದ್ದೇನೆ ಎಂದು ರಾಜ್ಯಪಾಲರು ಸುದ್ದಿಗಾರರಿಗೆ ತಿಳಿಸಿದರು.
  '    -   ?     ,    &          !../4ajbj9TF04
ಕೇರಳ ರಾಜ್ಯಪಾಲರ ಅಧಿಕತ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್‌ ಮಾಡಲಾದ ವೀಡಿಯೋದಲ್ಲಿ ಖಾನ್‌ ಅವರು, ರಾಮ್‌ ಲಲ್ಲಾನ ವಿಗ್ರಹದ ಮುಂದೆ ನಮಸ್ಕರಿಸುತ್ತಿರುವುದನ್ನು ತೋರಿಸುತ್ತಾ ಜೈ ಶ್ರೀ ರಾಮ್‌‍ ಎಂಬ ಘೋಷಣೆ  ಕೇಳಿಬರುತ್ತಿರುವ ಕಂಡು ಬರುತ್ತದೆ.