ಬಿಜೆಪಿ ರಾಜಕಾರಣ ರಾಷ್ಟ್ರಹಿತಕ್ಕಾಗಿ : ಸಿ.ಟಿ. ರವಿ
ಬೆಂಗಳೂರು,ಜೂನ್‌.23-ರಾಷ್ಟ್ರಹಿತವನ್ನು ಬಿಟ್ಟುಕೊಡದೆ ರಾಷ್ಟ್ರಹಿತದ ಹಿನ್ನೆಲೆಯಲ್ಲೇ ಬಿಜೆಪಿ ರಾಜಕಾರಣ ಮಾಡುತ್ತ ಬಂದಿದೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಹೇಳಿದರು.ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಏರ್ಪಡಿಸಿದ್ದ ಜಗನ್ನಾಥ ರಾವ್‌ ಜೋಶಿಯವರ ಜನ ದಿನ ಮತ್ತು ಶ್ಯಾಮಪ್ರಸಾದ ಮುಖರ್ಜಿಯವರ ಬಲಿದಾನ ದಿವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಧ್ಯಪ್ರದೇಶದಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ಜಗನ್ನಾಥ ರಾವ್‌ ಜೋಶಿ ಅವರು ಕಾರ್ಯಕರ್ತರಿಗೆ ಪ್ರೇರಕರು. ಅವರ ಹೆಸರನ್ನೀ ಈ ಭವನಕ್ಕೂ ಇಟ್ಟಿದ್ದೇವೆ ಎಂದು ವಿವರಿಸಿದರು. ಸಂಘಟಕ, ಮಾರ್ಗದರ್ಶಕರಾಗಿ ಪಕ್ಷದ ರಾಜ್ಯ ಮತ್ತು ದೇಶದ ಸಂಘಟನೆಯ ನಾಯಕತ್ವ ವಹಿಸಿ ಅವರು ಕರ್ನಾಟಕ ಕೇಸರಿ ಎಂಬ ಹೆಸರಿಗೆ ತಕ್ಕಂತೆ ಬದುಕಿದವರು ಎಂದು ತಿಳಿಸಿದರು.
ನರಗುಂದದಲ್ಲಿ ಅವರು ಹುಟ್ಟಿದ ಮನೆಯನ್ನು ಸಾರಕವಾಗಿ ಪರಿವರ್ತನೆ ಮಾಡಲಾಗಿದೆೆ. ಅಲ್ಲಿ ಅವರ ಬದುಕಿನ ಸಂಗತಿಗಳ ಚಿತ್ರಣ ಲಭಿಸುತ್ತದೆ. ವರ್ತಮಾನ ಮತ್ತು ಭವಿಷ್ಯದ ಪೀಳಿಗೆಗೂ ಅವರ ಜೀವನಾನುಭವ ಸಿಗಲಿ ಎಂದು ಸಾರಕ ಮಾಡಲಾಗಿದೆ ಎಂದು ಹೇಳಿದರು.
ಶ್ಯಾಮಪ್ರಸಾದ ಮುಖರ್ಜಿಯವರು ತಕ್ಕಮಟ್ಟಿನ ಶ್ರೀಮಂತ ಮನೆತನದಲ್ಲಿ ಅವರ ಜನ ಆಗಿತ್ತು. ಕಿರಿಯ ವಯಸ್ಸಿಗೇ ಕಲ್ಕತ್ತ ವಿಶ್ವವಿದ್ಯಾಲಯದ ಕುಲಪತಿಯಾಗಿ ಅವರು ಕೆಲಸ ಮಾಡಿದ್ದರು. ಹಿಂದೂ ಮಹಾಸಭೆಯ ಕಾರ್ಯಕಾರಿ ಅಧ್ಯಕ್ಷ, ಅಧ್ಯಕ್ಷರಾಗಿದ್ದರು. ರಾಷ್ಟ್ರೀಯ ಸರಕಾರದಲ್ಲಿ ಸಚಿವರಾಗಿದ್ದರು. ಇವರು ಕೇವಲ ಸುಶಿಕ್ಷಿತ, ವಾಗಿಯಲ್ಲ; ರಾಜನೀತಿ ಕ್ಷೇತ್ರದ ಕುಶಲ ಸಂಘಟಕನೂ ಆಗಿದ್ದು, ಅಪ್ರತಿಮ ರಾಷ್ಟ್ರವಾದಿಯಾಗಿ ಕಾರ್ಯನಿರ್ವಹಿಸಿದವರು ಎಂದು ವಿಶ್ಲೇಷಿಸಿದರು. ರಾಷ್ಟ್ರಹಿತದ ಜೊತೆ ಯಾವತ್ತೂ ರಾಜಿ ಮಾಡಿಕೊಳ್ಳದ ವ್ಯಕ್ತಿತ್ವ ಅವರದು ಎಂದು ತಿಳಿಸಿದರು.
ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಜನಸಂಘದ ಸಂಸ್ಥಾಪಕ ದಿವಂಗತ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿವಸ ಹಾಗೂ ಕರ್ನಾಟಕದ ಕೇಸರಿ ದಿವಂಗತ ಜಗನ್ನಾಥ ರಾವ್ ಜೋಷಿ ಅವರ ಜನ್ಮ ಜಯಂತಿಯನ್ನು ಆಚರಿಸಲಾಯಿತು.ಭಾರತದ ಏಕತೆಯ ರಕ್ಷಣೆಯಲ್ಲಿ ದಿವಂಗತ ಶಾಮ ಪ್ರಸಾದ್ ಮುಖರ್ಜಿಯವರ  ಪಾತ್ರ ಅತ್ಯಂತ ಅಮೂಲ್ಯವಾದದ್ದು.  ಬಂಗಾಳವನ್ನು ಮತ್ತು…../gSJaABu2a9
370ನೇ ವಿಧಿ ರದ್ದು ಮಾಡುವ ಜನಸಂಘದ ಮೊದಲ ಹೋರಾಟ ನಡೆದು 69 ವರ್ಷಗಳ ಬಳಿಕ, ಅವರ ಬಲಿದಾನವಾಗಿ 69 ವರ್ಷಗಳ ನಂತರ ನಾವು 370ನೇ ವಿಧಿ ರದ್ದುಪಡಿಸಿ, ಕಾಶೀರಕ್ಕೂ ಭಾರತದ ಸಂವಿಧಾನ, ಕಾಶೀರಕ್ಕೂ ಮೀಸಲಾತಿ ಅನುಕೂಲ, ಕಾಶೀರದ ಜನರೂ ಭಾರತೀಯತೆಯ ಒಂದು ಭಾಗ ಎಂಬುದನ್ನು ನರೇಂದ್ರ ಮೋದಿಯವರ ನೇತೃತ್ವದಲ್ಲಿ ಈಡೇರಿಸಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಶಾಸಕ ಸುನೀಲ್‌ ಕುಮಾರ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್‌ ಗೌಡ, ಶಾಸಕ ಬಸವರಾಜ್‌ ಮತ್ತಿಮೂಡ್‌, ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್‌ ಅಂಬೆಕಲ್ಲು, ವಿಭಾಗ ಸಂಘಟನಾ ಕಾರ್ಯದರ್ಶಿ ಉದಯ್‌ ಕುಮಾರ್‌ ಶೆಟ್ಟಿ, ವಿಭಾಗ ಪ್ರಭಾರಿ ರಾಜೇಶ್‌ ಕಾವೇರಿ, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಪಕ್ಷದ ಪ್ರಮುಖರು ಕಾರ್ಯಕರ್ತರು ಮತ್ತು ಕಾರ್ಯಾಲಯ ಸಿಬ್ಬಂದಿಗಳು ಉಪಸ್ಥಿತರಿದ್ದರು.