ಮಂಗಳೂರು : ಮಳೆಗೆ ಮನೆಯ ಗೋಡೆ ಕುಸಿದು ಒಂದೇ ಕುಟುಂಬದ ನಾಲ್ವರು ಸಾವು
ಮಂಗಳೂರು, ಜೂನ್‌ 26:ರಾತ್ರಿಯಿಡೀ ಸುರಿದ ಮಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುತ್ತಾರು ಮದನಿ ನಗರದಲ್ಲಿ ಮನೆಯ ಗೋಡೆ ಕುಸಿದು ಬಿದ್ದು ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಯಾಸಿರ್‌ (45), ಅವರ ಪತ್ನಿ ಮರಿಯಮ (40) ಹಾಗೂ ಮಕ್ಕಳಾದ ರಿಯಾನ ಮತ್ತು ರಿಫಾನ ಮೃತ ದುರ್ದೈವಿಗಳಾಗಿದ್ದಾರೆ.ಈ ಪ್ರದೇಶದಲ್ಲಿ ರಾತ್ರಿ ಇಡೀ ಭಾರಿ ಮಳೆ ಸುರಿದಿದ್ದು,ಅಬೂಬಕ್ಕರ್‌ ಎಂಬವರ ಮನೆಯ ಗೋಡೆ ಯಾಸಿರ್‌ ಅವರ ಮನೆ ಗೊಡೆ ಮೇಲೆ ಬಿದ್ದು ಅದು ಕೂಡ ಕುಸಿದಿದೆ.ಸ್ಥಳೀಯರು ನೆರವಿಗೆ ದಾವಿಸಿ ಅವಶೇಷಡಿ ಸಿಲುಕಿದ್ದವರನ್ನು ರಕ್ಷಿಸಲು ಮುಂದಾಗಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಹಾಗು ಪೊಲೀಸರು ಬರುವಷ್ಟರಲ್ಲಿ ಮನೆಯಲ್ಲಿದ್ದ ನಾಲ್ವರು ಕೊನೆಯುಸಿರೆಳೆದಿದ್ದಾರೆ.ಎಲ್ಲಾ ಮೃತದೇಹವನ್ನು ಹೊರತೆಗೆದು ಆಸ್ಪತ್ತೆಗೆ ಸಾಗಿಸಲಾಗಿದೆ.
ಘಟನೆ ನಡೆದಾಗ ಎಲ್ಲರೂ ಮಲಗಿದ್ದರು ಅವರ ಮೇಲೆ ಇಟ್ಟಿಗೆ ಮಣ್ಣು ಬಿದ್ದು ಅವಶೇಷದಿಂದ ಹೊರಬರಲಾಗದೆ ಕೊನೆಯುಸಿರೆಳೆದಿದ್ದಾರೆ,ಘಟನೆಗೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.ಉಳ್ಳಾಲ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.