ಅಪರ್ಣಾ ಅಗಲಿಕೆಯ ನೋವನ್ನು ಕವಿತೆ ಮೂಲಕ ವ್ಯಕ್ತಪಡಿಸಿದ ಪತಿ ನಾಗರಾಜು
ಬೆಂಗಳೂರು, ಜು. 12:ಪತ್ನಿ ಅಪರ್ಣಾಳನ್ನು ಕಳೆದುಕೊಂಡ ನೋವಿನಲ್ಲಿ ಪತಿ ನಾಗರಾಜು ಅವರು ರಚಿಸಿದ ಶೋಕ ಕವನಬೆಳಗಿಕೊಂಡಿರೆಂದುಕಿಡಿ ತಾಕಿಸಿ ಹೊರಟಿತುಹೆಣ್ಣುಚಿತ್ತು ತೆಗೆದುಬತ್ತಿಯ ನೆತ್ತಿ ಚೆನ್ನಾಗಿಸಿತಿರುಪಿ ತಿದ್ದಿಇರುತುಸುವಿರೆಂದು ಕರೆದರೂನಿಲ್ಲದೆಯೇಬೇರಾವುದೋ ಕರೆಗೆತಣ್ಣಗೆ ಓಗೊಟ್ಟ ಮೇರೆಯಲ್ಲಿಒಂದೇ ಒಂದುನಿಮಿಷಬಂದೇನೆಂದು ಕಡೆಗಳಿಗೆಯ ಸೆರಗಿನ ಬೆನ್ನಿನಲ್ಲಿಅಂದು.ಕಾದಿದ್ದೇನೆಈಗ ಬಂದಾಳೆಂದುಆಗ ಬಂದಾಳೆಂದುಮರಳಿಜೀವ ತಂದಾಳೆಂದುಇದುಮೂರನೇ ದಿವಸಇಷ್ಟಾಗಿಬೆಳಗಲಿಟ್ಟ ಕಿರಿಸೊಡರಬೆಳಕು ನಾನುಉರಿವುದಷ್ಟೇ ಕೆಲಸಇರುವ ತನಕ. ನಾಗರಾಜ್‌ ಅವರ ಫೇಸ್‌ಬುಕ್‌ ಬರಹಅಪರ್ಣಾ ಇಹಲೋಕದ ವ್ಯಾಪಾರವನ್ನು ತ್ಯಜಿಸಿ ಸ್ವರ್ಗಸ್ಥಳಾಗಿದ್ದಾಳೆ. ಕಳೆದ ಎರಡು ವರ್ಷಗಳಿಂದ ನಾನು ಮತ್ತು ಅವಳ ನಾಲ್ಕನೇ ಹಂತದಲ್ಲಿದ್ದ ಶ್ವಾಸಕೋಶದ ಕ್ಯಾನರ್‌ ವಿರುದ್ಧ ಸೆಣಸುತ್ತಿದ್ದೇವು. ಈ ಹೋರಾಟದಲ್ಲಿ ನಾವಿಬ್ಬರೂ ಸೋತಿದ್ದೇವೆ. ಅತ್ಯಂತ ವಿಷಾದದಿಂದ ಈ ಮಾತುಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.
ಅಪರ್ಣಾಳಿಗೆ ಬರುವ ಅಕ್ಟೋಬರ್‌ಗೆ 58 ವರ್ಷ ತುಂಬುತ್ತಿತ್ತು. ಎಲ್ಲರ ಪ್ರೀತಿ ಸಹಕಾರ ಇರಲಿ ಎಂದು ಅವರ ಪತಿ ವಸ್ತಾರೆ ನಾಗರಾಜು ಅವರು ಅಪರ್ಣಾ ಅವರ ಅಂತಿಮ ವಿದಾಯದ ಸಂದರ್ಭದಲ್ಲಿ ಮಾದ್ಯಮದವರೊಂದಿಗೆ ನೋವು ತೋಡಿಕೊಂಡ ರೀತಿ.